ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ: ನೆಮ್ಮದಿ ಕಸಿದ ದುಷ್ಕರ್ಮಿಗಳು!

ಶಿವಮೊಗ್ಗ : ತಾಲೂಕಿನ ಮತ್ತೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹೀರೋ ಡ್ಯುಯೆಟ್ ದ್ವಿಚಕ್ರ ವಾಹನ ಬೆಳಗ್ಗೆ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚಂದ್ರಶೇಖರ್ ಅವರು ತಮ್ಮ ಅತ್ತೆಯ ಹೆಸರಿನಲ್ಲಿದ್ದ ಸ್ಕೂಟಿಯನ್ನು ಪಡೆದುಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಚಂದ್ರಶೇಖರ್ ಇದನ್ನು ಬಳಸುತ್ತಿದ್ದರು. ಈಚೆಗೆ ರಾತ್ರಿ ಬಂದು ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕಳುವಾಗಿರುವ ಬಿಳಿ ಬಣ್ಣದ ವಾಹನದ ಮೌಲ್ಯ 30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

29/04/2026 07:43 am

Cinque Terre

2.38 K

Cinque Terre

0

ಸಂಬಂಧಿತ ಸುದ್ದಿ