ಚಿಕ್ಕಮಗಳೂರು: ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಯಾದ JEE Advanced 2026ರಲ್ಲಿ ಚಿಕ್ಕಮಗಳೂರಿನ ಸೈಂಟ್ ಮೇರಿಸ್ ಐಎಸ್‌ಸಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಮೈಲಿಗಲ್ಲು ಸಾಧಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ. ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಕೆವಿನ್ ರೋಡ್ರಿಗಸ್ ಈ ಬಾರಿ ಅಖಿಲ ಭಾರತ ಮಟ್ಟದಲ್ಲಿ 601ನೇ ರ‍್ಯಾಂಕ್ ಮುಡಿಗೇರಿಸಿಕೊಳ್ಳುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟು ಐತಿಹಾಸಿಕ ರೆಕಾರ್ಡ್ ಸೃಷ್ಟಿಸಿದ್ದಾರೆ.
ಇವರ ಜೊತೆಗೆ ಸಂಸ್ಥೆಯ ಮತ್ತಿಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಾದ ಜೇಂಕರ್ ಅಖಿಲ ಭಾರತ ಮಟ್ಟದಲ್ಲಿ 5620ನೇ ರ‍್ಯಾಂಕ್ ಹಾಗೂ ಗೋಕುಲ್ ಬಿ. ಎಸ್. 8829ನೇ ರ‍್ಯಾಂಕ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಅತ್ಯುನ್ನತ ರ‍್ಯಾಂಕ್‌ಗಳ ಭರ್ಜರಿ ಸಾಧನೆಯ ಆಧಾರದ ಮೇಲೆ ಕೆವಿನ್ ಮತ್ತು ಜೇಂಕರ್ ಇಬ್ಬರೂ ದೇಶದ ಅತ್ಯಂತ ಪ್ರಸಿದ್ಧ ಐಐಟಿ (IIT) ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಈಗ ಬಹುತೇಕ ಖಚಿತವಾಗಿದೆ.
ಮತ್ತೊಂದೆಡೆ ಸಂಸ್ಥೆಯ ವಿದ್ಯಾರ್ಥಿಗಳಾದ ಸಾದಿಯಾ ಶಹಜೈನ್, ಗೋಕುಲ್ ಬಿ. ಎಸ್. ಮತ್ತು ವಿಶ್ರುತಾ ಪಿ. ಅವರು ತಮ್ಮ JEE Main 2026ರ ಅತ್ಯುತ್ತಮ ಪ್ರದರ್ಶನದ ಬಲದೊಂದಿಗೆ ದೇಶದ ವಿವಿಧ ಪ್ರತಿಷ್ಠಿತ ಎನ್‌ಐಟಿ (NIT) ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಪ್ರವೇಶಾತಿ ಪಡೆಯಲು ಅರ್ಹತೆ ಗಳಿಸಿದ್ದಾರೆ.
ಈ ಹಿಂದೆ ಐಐಟಿ ಕೋಚಿಂಗ್ ಪಡೆಯುವುದಕ್ಕಾಗಿಯೇ ಜಿಲ್ಲೆಯ ವಿದ್ಯಾರ್ಥಿಗಳು ರಾಜಸ್ಥಾನದ ಕೋಟಾ, ಚೆನ್ನೈ, ಬೆಂಗಳೂರು, ಮಂಗಳೂರಿನಂತಹ ದೂರದ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಆ ಎಲ್ಲ ಗುಣಮಟ್ಟದ ತರಬೇತಿಯನ್ನು ಸೈಂಟ್ ಮೇರಿಸ್ ಐಎಸ್‌ಸಿ ಕಾಲೇಜಿನಲ್ಲಿ ಯಶಸ್ವಿಯಾಗಿ ನೀಡಿ, ನಮ್ಮ ವಿದ್ಯಾರ್ಥಿಗಳು ಐಐಟಿ ಹಾಗೂ ಎನ್‌ಐಟಿ ಸಂಸ್ಥೆಗಳಿಗೆ ಆಯ್ಕೆಯಾಗುವಂತೆ ಮಾಡಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.
PublicNext
01/06/2026 08:55 pm