ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಹಲವು ಕಡೆ ಹಲವು ಅವಾಂತರಗಳು ನಡೆದಿದೆ.
ಬೆಳಗಾವಿ ಕಿತ್ತೂರು ತಾಲೂಕಿನಲ್ಲಿ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅರ್ಧ ಗಂಟೆಗಳ ಕಾಲ ಸುರಿದ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು. ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಮಕ್ಕಳ ಪರದಾಟ ನಡೆಸಿದರು. ಬಳಿಕ ಸಿಬ್ಬಂದಿಗಳು ನೀರು ಹೊರಹಾಕಿದರು.
ವರುಣನ ಆರ್ಭಟಕ್ಕೆ ಸವದತ್ತಿ ನಗರದ ಮಾರುಕಟ್ಟೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಆಟೋ ಬೈಕ್ ನೀರಿನಲ್ಲಿ ಸಿಲುಕಿ ಜನ ಹೈರಾಣಾದರು. ಅಂಗಡಿ ಮುಂಗಟ್ಟುಗಳ ಮುಂದೆ ನೀರು ನುಗ್ಗಿದ್ದರಿಂದ ಜನ ಪರದಾಡಿದರು.
ಇನ್ನೂ ಬೈಲಹೊಂಗಲ ಪಟ್ಟಣದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದು ಹೋಗಿದೆ. ನೀರಿನ ರಭಸಕ್ಕೆ ತೇಲಿ ಹೊರಟಿದ್ದ ಬೈಕ್‌ಗಳನ್ನು ಹಿಡಿದಿಟ್ಟುಕೊಳ್ಳಲು ಸವಾರರು ಹರಸಾಹಸ ಪಟ್ಟರು.
PublicNext
08/06/2026 08:18 pm
LOADING...