ಅಥಣಿ: ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿ, ನದಿ ಪಾತ್ರದ ಗ್ರಾಮಸ್ಥರಿಗೆ ಮೊಸಳೆಗಳ ಕಂಟಕ ಎದುರಾಗಿದೆ. ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಗದ್ದೆಗೆ ನುಗ್ಗಿದ ಮೊಸಳೆಯೊಂದನ್ನು ಗ್ರಾಮಸ್ಥರು ಸೆರೆಹಿಡಿದು ಹಗ್ಗದಿಂದ ಮರಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ.
ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿರುವುದರಿಂದ ಜಲಚರಗಳು ಬಿಸಿಲಿಗೆ ಸಾವನ್ನಪ್ಪುತ್ತಿವೆ. ಇದೇ ಸಮಯದಲ್ಲಿ, ತೀವ್ರ ಬಿಸಿಲಿನ ತಾಪಕ್ಕೆ ಮೊಸಳೆಗಳು ನದಿ ಪಾತ್ರ ಬಿಟ್ಟು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿವೆ. ನದಿಯ ದಡಗಳಲ್ಲಿ ಮೊಸಳೆಗಳು ಪದೇ ಪದೇ ಪ್ರತ್ಯಕ್ಷವಾಗುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಗ್ರಾಮಸ್ಥರು ಸೆರೆಹಿಡಿದ ಈ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದರು. ಬಳಿಕ, ಅದನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಿದ್ದಾರೆ.
Kshetra Samachara
17/06/2026 09:20 am
LOADING...