ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮೃತ್ಯುಕೂಪವಾದ ತೆರೆದ ಬಾವಿ, ಕೆಸರಿನಲ್ಲಿ ಉಸಿರುಗಟ್ಟಿ ಎರಡು ಎತ್ತುಗಳ ದುರಂತ ಸಾವು!

ಚಿಕ್ಕಮಗಳೂರು: ಮೇಯಲು ತೆರಳಿದ್ದ ಎರಡು ಎತ್ತುಗಳು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶೃಂಗೇರಿ ತಾಲೂಕಿನ ಹಲಗಾರ್ ಆಲಂದೂರು ಗ್ರಾಮದಲ್ಲಿ ನಡೆದಿದೆ. ಬಾವಿಯಲ್ಲಿದ್ದ ಕೆಸರಿನಲ್ಲಿ ಸಿಲುಕಿಕೊಂಡ ಎತ್ತುಗಳು ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ನರಳಾಡುತ್ತಿದ್ದನ್ನು ಕಂಡು ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ​ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಸಿಬ್ಬಂದಿಗಳ ನಿರಂತರ ಹೋರಾಟ ಮತ್ತು ಪ್ರಯತ್ನದ ನಡುವೆಯೂ, ಕೆಸರಿನಲ್ಲಿ ಉಸಿರುಗಟ್ಟಿದ ಎತ್ತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಲುದಾರಿಯಲ್ಲೇ ಇರುವ ಇಂತಹ ಅಪಾಯಕಾರಿ ತೆರೆದ ಬಾವಿಗಳನ್ನು ತಕ್ಷಣವೇ ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Edited By :
PublicNext

PublicNext

11/06/2026 02:41 pm

Cinque Terre

7.25 K

Cinque Terre

0

ಸಂಬಂಧಿತ ಸುದ್ದಿ