ಚಿಕ್ಕಮಗಳೂರು : ಕಾಫಿನಾಡು ಅಂದ್ರೆ ಪ್ರವಾಸಿಗರ ಸ್ವರ್ಗ ಈ ಬಾರಿ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಪ್ರಕೃತಿಯು ಸಮೃದ್ಧವಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಪಾಲಿನ ಅಪ್ಪಟ ಸ್ವರ್ಗವಾಗಿ ಮಾರ್ಪಟ್ಟಿದೆ. ಗಿರಿಶಿಖರಗಳ ನಡುವೆ ತೇಲಾಡುತ್ತಿರುವ ಬೆಳ್ಳಗಿನ ಮೋಡಗಳ ಮನಮೋಹಕ ದೃಶ್ಯಗಳು ಪ್ರಕೃತಿ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ.
ಚಿಕ್ಕಮಗಳೂರು ನಗರ ಹಾಗೂ ಮುಳ್ಳಯ್ಯನಗಿರಿ ಭಾಗದಲ್ಲಿ ಸೃಷ್ಟಿಯಾಗಿರುವ ಈ ಅದ್ಭುತ ಪ್ರಕೃತಿ ಸೌಂದರ್ಯವು ಡ್ರೋನ್ ಕ್ಯಾಮರಾದಲ್ಲಿ ಆಕರ್ಷಕವಾಗಿ ಸೆರೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರದಲ್ಲಿರುವ ರಾಜ್ಯದ ಅತಿ ಎತ್ತರದ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಕಾಫಿನಾಡಿಗೆ ಹರಿದುಬರುತ್ತಿದೆ. ಬೆಟ್ಟದ ತುತ್ತತುದಿಗೆ ಸಾಗುತ್ತಿದ್ದಂತೆ ದಟ್ಟವಾದ ಮಂಜು ಕವಿದು ಪಕ್ಕದಲ್ಲಿರುವವರೇ ಕಾಣಿಸದಂತಹ ಹಿಮದ ಲೋಕ ಸೃಷ್ಟಿಯಾಗುತ್ತಿದ್ದು, ಇದರೊಂದಿಗೆ ತಣ್ಣಗೆ ಬೀಸುವ ಬಿರುಗಾಳಿಯು ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ರೋಮಾಂಚನ ಮತ್ತು ಅಪೂರ್ವ ಅನುಭೂತಿಯನ್ನು ಸೃಷ್ಟಿಸುತ್ತಿದೆ.
PublicNext
11/06/2026 07:38 pm
LOADING...