ಚಿಕ್ಕಮಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಕುಟುಂಬವನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದ್ದು, ಇದರ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಾದರೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ದಳದಿಂದ ಸಮಗ್ರ ತನಿಖೆಯಾಗಬೇಕು ಎಂದು ಎಂಎಲ್ಸಿ ಸಿ. ಟಿ. ರವಿ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದೊಂದಿಗೆ ಜನರಿಗೆ ತಲೆತಲಾಂತರಗಳ ನಂಬಿಕೆ ಹಾಗೂ ಅವಿನಾಭಾವ ಸಂಬಂಧವಿದೆ.
ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಗೆ ಮುಡುಪು ಕಟ್ಟುವುದು ಇವತ್ತು ನಿನ್ನೆಯ ಪದ್ಧತಿಯಲ್ಲ, ಅದು ಜನರ ಅಚಲವಾದ ವಿಶ್ವಾಸ. ಈ ಪ್ರಕರಣದ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ತಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದು, ಈಗ ತನಿಖೆಯಲ್ಲಿ ಅದು ಬಯಲಾಗುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಯಿಂದ ಪರಿಪೂರ್ಣ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಸಿ. ಟಿ. ರವಿ, ಧರ್ಮಾಧಿಕಾರಿಗಳ ಕುಟುಂಬದಿಂದ ಯಾವುದೇ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದು ಆಪಾದಿಸಿದರು.
ಪ್ರಸ್ತುತ ತನಿಖೆಯು ಕೇವಲ ಒಂದು ಆಯಾಮದಲ್ಲಿ ಮಾತ್ರ ನಡೆದಿದ್ದು, ಪ್ರಕರಣದ ಆಳ-ಅಗಲದ ಸಮಗ್ರ ತನಿಖೆಗಾಗಿ ನ್ಯಾಯಾಂಗ ಮೇಲ್ವಿಚಾರಣೆಯ ತನಿಖೆಯ ಅಗತ್ಯವಿದೆ. ಹಿಂದೂ ಧರ್ಮ ಹಾಗೂ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆಯೇ, ಇದಕ್ಕೆ ಫಂಡಿಂಗ್ ಮಾಡುತ್ತಿರುವ ಮೂಲ ಯಾವುದು ಮತ್ತು ಇದರ ಹಿಂದೆ ಮತಾಂತರ ಮಾಫಿಯಾದ ಸಂಪರ್ಕ ಏನಾದರೂ ಇದೆಯೇ ಎಂಬ ಇನ್ನೊಂದು ಮುಖದ ತನಿಖೆ ತುರ್ತಾಗಿ ನಡೆಯಬೇಕಾಗಿದೆ ಎಂದು ಅವರು ತೀವ್ರವಾಗಿ ಆಗ್ರಹಿಸಿದರು.
PublicNext
12/06/2026 05:36 pm
LOADING...