ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಅಕ್ರಮವಾಗಿ ಚಿಪ್ಪುಹಂದಿಯ ಚಿಪ್ಪು ಮಾರಾಟ ಮಾಡಲು ಯತ್ನಿಸಿದವನು ಅಂದರ್ - ಚಿಪ್ಪು, ನಾಡ ಬಂದೂಕು, ಬೈಕ್ ವಶ

ಚಾಮರಾಜನಗರ : ತಾಲೂಕಿನ ಹೆಗ್ಗೋಠಾರ ಗ್ರಾಮದ ದೊಡ್ಡಬೆಟ್ಟದ ಬಳಿ ಅಕ್ರಮವಾಗಿ ಚಿಪ್ಪುಹಂದಿಯ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ಚಾಮರಾಜನಗರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿ 2 ಕೆಜಿ 800 ಗ್ರಾಂ. ಚಿಪ್ಪುಹಂದಿಯ ಚಿಪ್ಪು, 4 ನಾಡ ಬಂದೂಕು, ಮೋಟಾರ್ ಬೈಕ್, ಇನ್ನಿತರ ಬಂದೂಕಿಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದೆ.

27 ವರ್ಷದ ಎಚ್.ಮಹೇಶ ನಾಯಕ ಬಂಧಿತ ವ್ಯಕ್ತಿಯಾಗಿದ್ದಾನೆ. ಜು.22ರಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಹೆಗ್ಗೋಠಾರ ಗ್ರಾಮದ ಬಳಿ ಇರುವ ದೊಡ್ಡಬೆಟ್ಟದ ಬಳಿ ಮಹೇಶ ನಾಯಕನನ್ನು ವಶಕ್ಕೆ ಪಡೆಯಲಾಗಿದೆ. 

ಕಾರ್ಯಾಚಾರಣೆಯಲ್ಲಿ ಅರಣ್ಯ ಘಟಕದ ಸಿಐಡಿ ಪೊಲೀಸ್ ಮಹಾನಿರ್ದೇಶಕರಾದ ಜಿ.ಸಂಗೀತ, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕಿ ಯಾಸ್ಮೀನ್ ತಾಜ್, ಸಿಬ್ಬಂದಿ ಹೆಚ್.ಡಿ. ಸ್ವಾಮಿ, ನವೀನ್ ಕುಮಾರ್, ವೀರಭದ್ರಪ್ಪ, ಬಸವಯ್ಯ, ಪ್ರಸಾದ್, ಗೋವಿಂದನಾಯಕ, ರಾಜು ಇದ್ದರು.

Edited By : PublicNext Desk
Kshetra Samachara

Kshetra Samachara

23/07/2026 06:18 pm

Cinque Terre

8.58 K

Cinque Terre

0

ಸಂಬಂಧಿತ ಸುದ್ದಿ