ಚಾಮರಾಜನಗರ: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 13 ಮಂದಿಯನ್ನು ಬಂಧಿಸಿರುವ ಪೊಲೀಸರು ₹5.30 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಸುದರ್ಶನಗೌಡ, ಮಹದೇವಮೂರ್ತಿ, ಮಹಮದ್ ಇಲಿಯಾಜ್, ರಾಜು, ಮಹದೇವಸ್ವಾಮಿ, ಮಹೇಶ, ಭರತ್ ಭೂಷಣ್, ಕುಮಾರ, ಸಂಜಯ್, ನಾಗಣ್ಣ, ಶಿವಮೂರ್ತಿ, ರಾಜು, ಶಿವಲಿಂಗಪ್ಪ ಬಂಧಿತ ಆರೋಪಿಗಳು.
ನಂಜನಗೂಡು ರಸ್ತೆಯ ಮರಿಯಾಲದ ಬಳಿ ಇರುವ ಶ್ರೀದೇವಿ ಗಾರ್ಡನ್ ಮನೆಯೊಂದರಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಜೂಜಾಟದಲ್ಲಿ ತೊಡಗಿದ್ದ 13 ಮಂದಿಯನ್ನು ಬಂಧಿಸಿ, ₹5.30 ಲಕ್ಷ ನಗದು, 12 ಮೊಬೈಲ್ ಹಾಗೂ 5 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/07/2026 04:10 pm