ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಇಲ್ಲ ಕಾಳಜಿ: ಪಾಲಿಕೆಯ ದಿವ್ಯ ನಿರ್ಲಕ್ಷ್ಯ!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ. ಈ ಪಾಲಿಕೆಯ ಸೌಂದರ್ಯಕ್ಕೆ ಪೌರ ಕಾರ್ಮಿಕರ ಕೊಡುಗೆ ಬಹಳಷ್ಟಿದೆ. ಹೀಗಿದ್ದರೂ, ಪಾಲಿಕೆ ಮಾತ್ರ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ.

ಪೌರ ಕಾರ್ಮಿಕರು ಅವಳಿನಗರದ ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಶ್ರಮಜೀವಿಗಳು. ಇಂತಹ ಶ್ರಮಜೀವಿಗಳಿಗೆ ಪಾಲಿಕೆಯು ಯಾವುದೇ ಜೀವ ರಕ್ಷಕ ಸಲಕರಣೆಗಳನ್ನು ವಿತರಣೆ ಮಾಡುತ್ತಿಲ್ಲ. ಹೌದು.. ಕಾಲಿಗೆ ಬೂಟು, ಕೈಗೆ ಕೈಗವಸುಗಳನ್ನು(ಹ್ಯಾಂಡ್ ಗ್ಲೌಸ್) ನೀಡಬೇಕು. ಆದರೆ ಯಾವುದನ್ನೂ ನೀಡದೇ ಇರುವುದರಿಂದ ಪೌರಕಾರ್ಮಿಕರು ಚಪ್ಪಲಿ ಹಾಕಿಕೊಂಡು ಬರಿಗೈಯಲ್ಲಿಯೇ ಸ್ವಚ್ಚತೆ ಕಾರ್ಯ ಮಾಡುತ್ತಿದ್ದಾರೆ.

ಇನ್ನೂ ಪೌರಕಾರ್ಮಿಕರು ಮಳೆ, ಬಿಸಿಲು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಪೌರಕಾರ್ಮಿಕರ ಜೀವಕ್ಕೆ ಹಾಗೂ ಆರೋಗ್ಯಕ್ಕೆ ಸೂಕ್ತ ಪರಿಕರಗಳನ್ನು ನೀಡಬೇಕಿದ್ದ ಪಾಲಿಕೆಯು ನೀಡದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/07/2026 06:27 pm

Cinque Terre

116.12 K

Cinque Terre

2

ಸಂಬಂಧಿತ ಸುದ್ದಿ