ಹುಬ್ಬಳ್ಳಿ: ಹುಬ್ಬಳ್ಳಿಯ ಗುರುನಾಥ್ ಕಾಲೋನಿ ಸಂಗಮೇಶ ನಗರದಲ್ಲಿರುವ ಬಸ್‌ಸ್ಟಾಪ್ ಬಳಿ, ಪೈಪ್‌ಲೈನ್ ಒಡೆದು ಕಿರಾಣಿ ಅಂಗಡಿಗೆ ನೀರು ನುಗ್ಗಿದ ಪರಿಣಾಮ, ಅಂಗಡಿ ಸಂಪೂರ್ಣ ಜಲಾವೃತಗೊಂಡಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮಾಲೀಕರಿಗೆ ಸುಮಾರು 1.5 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ಹೌದು, ಕಳೆದ ಹಲವು ದಿನಗಳಿಂದ ಪೈಪ್‌ಲೈನ್ ಚೇಂಬರ್ ಹಾಳಾಗಿರುವ ಬಗ್ಗೆ ಅಧಿಕಾರಿಗಳು ಹಾಗೂ ಎಲ್ ಆ್ಯಂಡ್ ಟಿ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಶಾಶ್ವತ ಪರಿಹಾರ ನೀಡದೆ ಕೇವಲ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಪೈಪ್‌ಲೈನ್ ಏಕಾಏಕಿ ಒಡೆದು ಅಪಾರ ಪ್ರಮಾಣದ ನೀರು ಅಂಗಡಿಗೆ ನುಗ್ಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಕೂಡಲೇ ಸಮಸ್ಯೆ ಪರಿಹರಿಸಿ, ಅಂಗಡಿ ಮಾಲೀಕರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/07/2026 05:10 pm
LOADING...