ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಜನರ ಜೀವನಾಡಿ ಕೆರೆಗೆ ಕಂಟಕ; ಸುತ್ತ ಅನೈರ್ಮಲ್ಯ, ಮದ್ಯ ಘಾಟು

ಹುಬ್ಬಳ್ಳಿ : ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಹಳ್ಳಿಗಳ ಕೆರೆಗಳು ಇದೀಗ ನಿರ್ವಹಣೆ ಕೊರತೆಯಿಂದ ಹಾಳಾಗಿ ಮದ್ಯ ಸೇವನೆ ಅಡ್ಡೆಯಾಗಿ, ಕಸ ತುಂಬಿವೆ.

ಹೌದು ! ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರಿಗೆ ಕುಡಿಯುವ ನೀರಿನ ಆಶ್ರಯ ತಾಣವಾದ ಕೆರಯೊಂದು ಸದ್ಯಕ್ಕೆ ಮಲಿನವಾಗುತ್ತಿದೆ ಎಂಬ ಆರೋಪ ಕೇಳಿ‌ ಬಂದಿದೆ.

ಕೆರೆಗೆ ನೀರು ಬರುವ ನಾಲೆ ನಿರ್ವಹಣೆ ಇರಲಾರದೆ ಹುಲ್ಲುಗಾವಲು ಬೆಳೆದಿದೆ. ಕೆರೆಯ ಸುತ್ತ ಮದ್ಯ ಸೇವನೆ ಮಾಡಿ ಪ್ಲಾಸ್ಟಿಕ್ ಕವರ್, ಗುಟ್ಕಾ ಎಸೆಯಲಾಗಿದೆ, ಕೆಲವೆಡೆ ಕೊಳಚೆಯಂತಹ ಹಸಿರು ಶೀಲಿಂಧ್ರ ಸೃಷ್ಟಿಯಾಗಿದ್ದು, ನಿರ್ವಹಣೆ ಅಭಾವ ಎದ್ದು ತೋರುತ್ತಿದೆ.

ಜಾನುವಾರುಗಳನ್ನು ಕೆರೆಗೆ ನೀರು ಸೇವನೆಗೆ ಬಿಡಲಾಗುತ್ತಿದೆ, ಮನೆಯಲ್ಲಿ ಬೇಡವಾದ ತ್ಯಾಜ್ಯ ಬಟ್ಟೆ, ಚಪ್ಪಲಿ ಕೆರೆಯ ಸುತ್ತ ಬಿದ್ದಿವೆ, ಸದ್ಯಕ್ಕಂತೂ ಕೆರೆಯೂ ಸೊಳ್ಳೆಗಳ ಆವಾಸಸ್ಥಾನವಾಗಿ ರೋಗದ ಭೀತಿ ಎದುರಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ ಗ್ರಾಮಸ್ಥರು, ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ವಿಡಿಯೋ ಕಳುಹಿಸಿ ಸಮಸ್ಯೆ ಬಹಿರಂಗ ಪಡಿಸಿದ್ದಾರೆ.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/07/2026 08:11 pm

Cinque Terre

55.51 K

Cinque Terre

0

ಸಂಬಂಧಿತ ಸುದ್ದಿ