ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಮೇಯರ್ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆದರೆ, ಪಾಲಿಕೆಯ ಅಧಿಕಾರಿಗಳ ಹಾಗೂ ಐಟಿ ವಿಭಾಗದ ದಿವ್ಯ ನಿರ್ಲಕ್ಷ್ಯದಿಂದಾಗಿ ಸರಿಯಾದ ಸಮಯಕ್ಕೆ ಮೇಯರ್ ಪೋನ್ ಇನ್ ಕಾರ್ಯಕ್ರಮ ಆರಂಭವಾಗದೇ ಸಾಕಷ್ಟು ಗೊಂದಲ ಉಂಟಾಗಿದ್ದು, ಅಧಿಕಾರಿಗಳ ಯಡವಟ್ಟಿನಿಂದ ಫೋನ್ ಇನ್ ಕಾರ್ಯಕ್ರಮ ಜನರಲ್ಲಿ ಅಸಮಾಧಾನ ಹುಟ್ಟು ಹಾಕಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದ ಎರಡನೇ ಅತಿ ದೊಡ್ಡ ಪಾಲಿಕೆ. ಈ ಪಾಲಿಕೆಯಲ್ಲಿ ಮೇಯರ್ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿರುತ್ತದೆ. ಆದರೆ, ಕಾರ್ಯಕ್ರಮದ ದಿನವೇ ಫೋನ್ ಗಳು ಲಭ್ಯವಿಲ್ಲದೇ, ಸರಿಯಾದ ಸಿದ್ಧತೆ ಇಲ್ಲದಿರುವುದರಿಂದ ಸುಮಾರು ಅರ್ಧಗಂಟೆ ಕಾಲ ಮೇಯರ್ ಹಾಗೂ ಅಧಿಕಾರಿಗಳು ಕಾಲಹರಣ ಮಾಡುವಂತಾಯಿತು. ಅಲ್ಲದೇ ಐಟಿ ವಿಭಾಗದ ಜವಾಬ್ದಾರಿಯಲ್ಲಿರುವ ಫೋನ್ ಗಳು ಸಿಗದೇ ಇರುವ ಕಾರಣಕ್ಕೆ ಬಹುನಿರೀಕ್ಷಿತ ಮೇಯರ್ ಫೋನ್ ಇನ್ ಕಾರ್ಯಕ್ರಮ ನೂತನ ಮಹಾಪೌರರ ಮೊದಲ ಕಾರ್ಯಕ್ರಮಕ್ಕೆ ಅಗೌರವ ಸೂಚಿಸಿದಂತಾಗಿದ್ದು, ಈ ಬಗ್ಗೆ ಮೇಯರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಬೇಜವಾಬ್ದಾರಿ ತೋರಿದ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಹೇಳಿದ್ದಾರೆ.
ಇನ್ನೂ ಮೇಯರ್ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಪಾಲಿಕೆಯ ಅಧಿಕಾರಿಗಳಲ್ಲಿ ನಿರ್ಲಕ್ಷ್ಯದ ಮನೋಭಾವ ಹೊಂದಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದ್ದು, ಮೇಯರ್ ಅವರು ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸುವ ಮೂಲಕ ಪಾಲಿಕೆ ಆಡಳಿತ ವೈಖರಿಯನ್ನು ಚುರುಕುಗೊಳಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2026 06:45 pm
LOADING...