ಹುಬ್ಬಳ್ಳಿ : ಹೂವಿನಂತಿದ್ದ ಹುಬ್ಬಳ್ಳಿ ಸರಿಯಾದ ಅಭಿವೃದ್ಧಿ ಇಲ್ಲದೆ ಬಾಡಿ ಹೋಗಿದೆ. ಅದಕ್ಕೆ ಮುಖ್ಯ ಕಾರಣವೇ ಈ ಸರ್ಕಾರಗಳು ತಂದ ದೋಷಪೂರಿತ ಪ್ರಾಜೆಕ್ಟ್‌ಗಳು. ಸ್ಮಾರ್ಟ್ ಸಿಟಿ ಎಂದು ಹಣೆಪಟ್ಟಿ ಹೊತ್ತಿದ್ದೇ ಹೊತ್ತಿದ್ದು, ವಾಣಿಜ್ಯ ನಗರಿ ಈಗ ಕಂಗಾಲಾದ ನಗರವಾಗಿದೆ. ಅದರಲ್ಲೂ ಈ ಬಿಆರ್‌ಟಿಎಸ್ (BRTS) ಪ್ರಾಜೆಕ್ಟ್ ತೀರಾ ಕಳಪೆ ಯೋಜನೆಯಾಗಿದೆ. ಈಗ ಅದೇ ರೀತಿ ಫ್ಲೈಓವರ್ ಕಾಮಗಾರಿಯೂ ನಡೆಯುತ್ತಿದೆ. ಇದರಿಂದ ಇಡೀ ಹುಬ್ಬಳ್ಳಿ ನಗರದ ಅಂದವೇ ಹಾಳಾಗಿ ಹೋಗಿದೆ. ಫ್ಲೈಓವರ್ ಪ್ರಾಜೆಕ್ಟ್ ಪಡೆದ ಈ ಝಂಡು ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾಂಟ್ರಾಕ್ಟರ್ ನಾಪತ್ತೆಯಾಗಿದ್ದಾನಂತೆ ಎಂದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಹೇಳುತ್ತಿದ್ದಾರೆ.
ಹೌದು, ಫ್ಲೈಓವರ್ ಕಾಮಗಾರಿ ಆರಂಭವಾದಂದಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಅವಾಂತರ ಆಗುತ್ತಲೇ ಇದೆ. ಟ್ರಾಫಿಕ್ ಜಾಮ್ ಆಗುವುದು ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ಜನರು ದಿನಂಪ್ರತಿ ಜಟಕಾ ಬಂಡಿಯಂತೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹಳೇ ಕೋರ್ಟ್ ಸರ್ಕಲ್ ಬಳಿ ಕರ್ತವ್ಯನಿರತ ಎಎಸ್‌ಐ (ASI) ಪೊಲೀಸ್ ಮೇಲೆ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟಿದ್ದಾರೆ. ಇದಾಗುತ್ತಿದ್ದಂತೆ ಝಂಡು ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾಂಟ್ರಾಕ್ಟರ್ ನಾಪತ್ತೆಯಾಗಿದ್ದಾನೆ. ಝಂಡು ಕಂಪನಿಯ ಎಂಡಿ ಮತ್ತು ಕಾಂಟ್ರಾಕ್ಟರ್ ಸೇರಿ 12 ಜನರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ದುರಾದೃಷ್ಟಕ್ಕೆ ಆ ಕಾಂಟ್ರಾಕ್ಟರ್ ಓಡಿಹೋಗಿದ್ದಾನೆ ಎಂದು ಸಚಿವ ಸಂತೋಷ್ ಲಾಡ್ ಹೇಳುತ್ತಿದ್ದಾರೆ.
(ಬೈಟ್: ಸಂತೋಷ್ ಲಾಡ್, ಸಚಿವರು)
ಇನ್ನು ಇಷ್ಟು ದೊಡ್ಡದಾದ ಫ್ಲೈಓವರ್ ಕಾಮಗಾರಿಗೆ ಕೈಬೆರಳಣಿಕೆಯಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಡೆಯೂ ಅರ್ಧಂಬರ್ಧ ಕೆಲಸವಾಗಿದೆ. ಒಂದೂ ಕಡೆಯೂ ಪೂರ್ಣಪ್ರಮಾಣದ ಕಾಮಗಾರಿ ಮುಗಿದಿಲ್ಲ. ಹೊಸೂರು ಕ್ರಾಸ್, ಕೋರ್ಟ್ ಸರ್ಕಲ್, ಈಗ ಲ್ಯಾಮಿಂಗ್ಟನ್ ರೋಡ್... ಇಷ್ಟೊಂದು ನಿರ್ಲಕ್ಷ್ಯ ತೋರುವ ಈ ಝಂಡು ಕಂಪನಿಗೆ ಈ ಪ್ರಾಜೆಕ್ಟ್ ಕೊಡಬಾರದಿತ್ತು. ಪಕ್ಕದ ರಾಜ್ಯ ಗೋವಾದಲ್ಲಿ ದೊಡ್ಡ ಪ್ರಮಾಣದ ಫ್ಲೈಓವರ್ ಕಾಮಗಾರಿ ಮಾಡುತ್ತಿದ್ದಾರೆ, ಕೇವಲ ಒಂದು ವರ್ಷದಲ್ಲಿ ಫ್ಲೈಓವರ್ ಮುಗಿಸಿದ್ದಾರೆ. ಆದರೆ ನಮ್ಮ ಹುಬ್ಬಳ್ಳಿ ಫ್ಲೈಓವರ್ ವರ್ಷಗಳೇ ಕಳೆದರೂ ಇನ್ನೂ ಮುಗಿಯುತ್ತಿಲ್ಲ. ಇದು ನೋಡಿ ನಮ್ಮ ವ್ಯವಸ್ಥೆ, ಜನರೇ ಈಗಲಾದರೂ ಎಚ್ಚೆತ್ತುಕೊಳ್ಳಿ.
Kshetra Samachara
05/08/2026 04:29 pm