ಕುಂದಗೋಳ: ಮಳೆ ಅಭಾವದ ಹಿನ್ನೆಲೆಯಲ್ಲಿ ರೈತಾಪಿ ಕುಲ ಬೆಳೆಗಳನ್ನು ಉಳಿಸಿಕೊಳ್ಳಲು ಕೃಷಿ ಹೊಂಡದ ಮೊರೆ ಹೋಗಿ ಬೆಳೆಗಳಿಗೆ ನೀರು ಹಾಕುವ ದೃಶ್ಯಗಳು ಅಕ್ಷರಶಃ ರೈತ ಕುಲದ ಕಷ್ಟಕ್ಕೆ ಹಿಡಿದ ಕನ್ನಡಿಯಾಗಿವೆ.
ಹೌದು! ಕುಂದಗೋಳ ತಾಲೂಕಿನ ಎಲ್ಲೆಡೆ, ಈ ಬಾರಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳು ಬಾಡುತ್ತಿವೆ. ಅಷ್ಟೇ ಅಲ್ಲದೆ ಬೆಳೆಗಳಿಗೆ ರೋಗದ ಬಾಧೆಯೂ ಆವರಿಸಿದೆ.
ಈ ಕಾರಣ ರೈತಾಪಿ ಜನರು ತಮ್ಮ ಜಮೀನಿನಲ್ಲಿನ ಕೃಷಿ ಹೊಂಡದಲ್ಲಿ ಸಂಗ್ರಹವಾದ ನೀರನ್ನು ವಾಣಿಜ್ಯ ಬೆಳೆಯಾದ ಹತ್ತಿ ಗಿಡಗಳಿಗೆ ನೀರುಣಿಸುವ ದೃಶ್ಯಗಳು 'ವರುಣದೇವ ಕೃಪೆ ತೋರು' ಎನ್ನುವಂತಿವೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಸಂಶಿ ಸೇರಿದಂತೆ ಹಲವು ಭಾಗಗಳಲ್ಲಿ ಹತ್ತಿ ಬೆಳೆ ಹಾಕಿದ ರೈತರು ಕೂಲಿಯಾಳುಗಳಿಗೆ ಹಣ ನೀಡಲಾಗದಂತಹ ಪರಿಸ್ಥಿತಿ ತಲುಪಿದ್ದಾರೆ. ಹೀಗಾಗಿ, ತಮ್ಮ ಕುಟುಂಬದ ಸದಸ್ಯರು ಮತ್ತು ಶಾಲಾ ಮಕ್ಕಳನ್ನು ಹೊಲಕ್ಕೆ ಕರೆತಂದು ಬೆಳೆಗಳಿಗೆ ನೀರು ಉಣಿಸಿ, ಬೆಳೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/07/2026 02:14 pm
LOADING...