ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸುಪ್ರಸಿದ್ಧ ಭತ್ತದ ಕಣಜ ಕಲಘಟಗಿ - ಕಣ್ಮರೆಯಾಗುತ್ತಿದೆ ಜವಾರಿ ಭತ್ತ

ಕಲಘಟಗಿ: ಕಲಘಟಗಿ ತಾಲೂಕು ಎಂದರೆ ಇತ್ತೀಚಿನ ದಿನಗಳಲ್ಲಿ 'ತೊಟ್ಟಿಲು ನಗರಿ' ಎಂದು ಪ್ರಸಿದ್ಧಿ ಪಡೆದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಲಘಟಗಿ ತಾಲೂಕು ಹಲವಾರು ವರ್ಷಗಳ ಹಿಂದೆ 'ಭತ್ತದ ಕಣಜ' ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಅರೆಮಲೆನಾಡು ಎಂದು ಕರೆಯಲ್ಪಡುವ ಈ ತಾಲೂಕಿನಲ್ಲಿ ರೈತರು ಘಮಘಮಿಸುವ ಜವಾರಿ ಭತ್ತ ಬೆಳೆಯುತ್ತಿದ್ದರು.

ಇಲ್ಲಿ ಬೆಳೆಯುವ ಭತ್ತಕ್ಕೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಾರಿ ಬೇಡಿಕೆ ಇತ್ತು. ಈ ಭತ್ತವು ದೇಹಕ್ಕೆ ಆರೋಗ್ಯಕರ ಹಾಗೂ ರುಚಿಕರವಾದ ತಳಿಯಾಗಿತ್ತು ಎಂದು ಇಲ್ಲಿಯ ರೈತರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದರಿಂದ ರೈತರು ಭತ್ತ ಬೆಳೆಯುವುದನ್ನು ಬಿಟ್ಟು ಕಬ್ಬು ಹಾಗೂ ಗೋವಿನಜೋಳದ ಬೆಳೆಯತ್ತ ಮೊರೆ ಹೋಗಿದ್ದು, ಕಲಘಟಗಿಯ ಜವಾರಿ ಭತ್ತ ಕಣ್ಮರೆಯಾಗುತ್ತಿದೆ.ಆದರೂ ತಾಲೂಕಿನಲ್ಲಿ ಕೆಲವೇ ಕೆಲವು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಹೊಲಗಳಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿದ್ದ ಕಲಘಟಗಿ ಈಗ ಕಬ್ಬು ಹಾಗೂ ಗೋವಿನಜೋಳಕ್ಕೆ ಪ್ರಸಿದ್ಧಿ ಪಡೆಯುತ್ತಿದೆ.

ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2026 12:53 pm

Cinque Terre

26.06 K

Cinque Terre

0

ಸಂಬಂಧಿತ ಸುದ್ದಿ