ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಮಳೆ ಇಲ್ಲದೇ ಬೆಳೆ ಒಣಗುತ್ತಿವೆ, ಸಾಲ ಮರುಪಾವತಿಗೆ ನೋಟಿಸ್ ಕೊಟ್ರೆ ಸಾಲ ಎಲ್ಲಿಂದ ಕಟ್ಟಬೇಕು ಅಂತ ರೈತರ ಆಕ್ರೋಶ

ಹೊಸಪೇಟೆ: ರಾಜ್ಯದಲ್ಲಿ ಮಳೆಯಿಲ್ಲದೇ ಬರಗಾಲ ಆವರಿಸಿದ ಬೆನ್ನಲ್ಲೇ ರೈತ ಸಮುದಾಯ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ಸಂಕಷ್ಟಕ್ಕೆ ತುತ್ತಾಗಿರೋ

ವಿಜಯನಗರ ಜಿಲ್ಲೆಯ ರೈತರ ಗಾಯದ ಮೇಲೆ ಬ್ಯಾಂಕುಗಳು ಬರೆ ಎಳೆದಿವೆ. ಸಾಲ ಮರುಪಾವತಿಸುವಂತೆ ವಿಜಯನಗರ ಜಿಲ್ಲೆಯ ರೈತರಿಗೆ ಬ್ಯಾಂಕುಗಳು ನೋಟಿಸ್ ನೀಡಿವೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ, ಕಾಕುಬಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರಿಗೆ ಸಾಲ ಮರುಪಾವತಿ ಮಾಡಬೇಕು ಅಂತ ನೋಟಿಸ್ ನೀಡಿವೆ. ಇದಕ್ಕೆ ರೈತರು ಆಕ್ರೋಶ ಹೊರಹಾಕಿದ್ರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್ ಜಾರಿ ಆಗಿದೆ. ಮಳೆಯಿಲ್ಲದೇ ಸಾಲ ಶೂಲ ಮಾಡಿ ಬೆಳೆದ ಬೆಳೆಗಳು ಕೈಕೊಟ್ಟ ಬೆನ್ನಲ್ಲೇ ಇದೀಗ ರೈತರಿಗೆ ಸಾಲ ವಾಪಸಾತಿ ಮಾಡುವಂತೆ ಬ್ಯಾಂಕುಗಳಿಂದ ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡಿದ್ದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅತ್ತ ಬರಗಾಲಕ್ಕೆ ತುತ್ತಾಗಿ ಮಳೆಯಿಲ್ಲದೇ ಕೆಲಸವಿಲ್ಲದೇ ಗುಳೇ ಹೋಗ್ತಿರೋ ವಿಜಯನಗರ ಜಿಲ್ಲೆಯ ಜನ್ರು, ಸಾಲ ವಸೂಲಾತಿ ನೋಟಿಸ್‌ನಿಂದ ಅನ್ನದಾತರು ಕಂಗಾಲಾಗಿದ್ದಾರೆ. ಇದೇ ವೇಳೆ ಮಾತಾಡಿರೋ ರೈತರು ಬರಗಾಲ ಬಿದ್ದಿರೋದ್ರಿಂದ ಕೂಡಲೇ ಸರ್ಕಾರ ಬ್ಯಾಂಕುಗಳಿಗೆ ರೈತರಿಂದ ಸಾಲ ವಸೂಲಿಗೆ ಮುಂದಾಗಬಾರದು ಅಂತಾ ಆದೇಶ ಹೊರಡಿಸಬೇಕು. ಲಕ್ಷಾಂತರ ಕೋಟಿ ಸಾಲ ಮಾಡಿ ಕಟ್ಟದೇ ದೇಶ ತೊರೆದ ವಿಜಯ ಮಲ್ಯ, ಅದಾನಿ ಅಂತವ್ರ ಸಾಲ ಮನ್ನಾ ಮಾಡುತ್ತವೆ. ಬರಗಾಲ ಬಂದು ರೈತರು ಸಂಕಷ್ಟದಲ್ಲಿದ್ದಾರೆ. ರೈತರದ್ದು ಸ್ವಲ್ಪ ಸಾಲವನ್ನ ಮನ್ನಾ ಮಾಡಬೇಕು ಅಂತಾ ರೈತರು ಆಗ್ರಹಿಸಿದ್ರು.

Edited By :
PublicNext

PublicNext

29/07/2026 12:55 pm

Cinque Terre

6 K

Cinque Terre

0

ಸಂಬಂಧಿತ ಸುದ್ದಿ