ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಮಂತ್ರಿಸ್ಥಾನಕ್ಕಾಗಿ ಸಿಎಂ ಬಳಿ ಚರ್ಚಿಸುವೆ"

ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ಕಡೆಗಣನೆ: ಸಿಎಂ ಬಳಿ ಮನವಿ ಮಾಡುವುದಾಗಿ ಪಿಟಿಪಿ ಹೇಳಿಕೆ!

ಹೊಸಪೇಟೆ: ರಾಜ್ಯ ಸಚಿವ ಸಂಪುಟದಲ್ಲಿ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ಜಿಲ್ಲೆಯ ನಾಯಕರಲ್ಲಿ ಮತ್ತು ಜನರಲ್ಲಿ ಮತ್ತೆ ನಿರಾಸೆ ಮೂಡಿಸಿದೆ. ವಿಜಯನಗರ ನೂತನ ಜಿಲ್ಲೆಯಾದ ಬಳಿಕ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಆನಂದ್ ಸಿಂಗ್ ಒಬ್ಬರೇ ಸಚಿವರಾಗಿದ್ದನ್ನು ಬಿಟ್ಟರೆ, ಬಳಿಕ ಹೊಸ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಆರ್. ಗವಿಯಪ್ಪ ಅವರು ಹೈಕಮಾಂಡ್ ಮಟ್ಟದಲ್ಲಿ ನಡೆಸಿದ ಪ್ರಯತ್ನ ವಿಫಲವಾದಂತಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್, "ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಬಳಿ ನಾನು ಮಾತುಕತೆ ನಡೆಸಲಿದ್ದೇನೆ" ಎಂದಿದ್ದಾರೆ.

"ಈ ಹಿಂದೆ 2016ರಲ್ಲೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಗೊಂದಲ ಉಂಟಾಗಿತ್ತು. ಮಂತ್ರಿಮಂಡಲ ವಿಸ್ತರಣೆಯು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಸದ್ಯ ಅರ್ಹರಿಗೆ ಸಚಿವ ಸ್ಥಾನ ನೀಡಲಾಗಿದೆ" ಎಂದು ಪಿ.ಟಿ. ಪರಮೇಶ್ವರ್ ನಾಯಕ್ ತಿಳಿಸಿದ್ದಾರೆ.

Edited By :
PublicNext

PublicNext

04/08/2026 04:45 pm

Cinque Terre

5.85 K

Cinque Terre

0

ಸಂಬಂಧಿತ ಸುದ್ದಿ