ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಮಣ್ಣಿನ ಪರಿಕರ ಮಾರಾಟಕ್ಕೆ! ಜಲ ದಿಗ್ಬಂಧನ, ಬಡವರ ಗೋಳು ಕೇಳೋರು ಯಾರು?

ಹುಬ್ಬಳ್ಳಿ : ಅಳಿವಿನ ಅಂಚಿನಲ್ಲಿರುವ ಕುಂಬಾರಿಕೆ ಉಳಿಸಬೇಕು, ಬೆಳೆಯುತ್ತಿರುವ ಜಗತ್ತಿಗೆ ಮಣ್ಣಿನ ಪರಿಕರಗಳನ್ನು ಪರಿಚಯಿಸಬೇಕು, ಅದರಲ್ಲೇ ತುತ್ತಿನ ಅನ್ನ ಗಳಿಸಬೇಕು ಎಂದು ಹುಬ್ಬಳ್ಳಿ ಈದ್ಗಾ ಮೈದಾನದ ಮುಂದೆ ಮಡಿಕೆ ವ್ಯಾಪಾರ ಮಾಡುತ್ತಿರುವ ಬದುಕಿಗೆ ಸದ್ಯ‌ ಬರೆಯಾಗಿದೆ.

ಹೌದು! ಹುಬ್ಬಳ್ಳಿ ಈದ್ಗಾ ಮೈದಾನದ ಕಾಂಪೌಂಡ್ ಮುಂದೆ ಗುಡಿ ಕೈಗಾರಿಕೆ ಉಳಿವಿಗಾಗಿ ಮತ್ತು ತಮ್ಮ ಹೊಟ್ಟೆಪಾಡಿಗಾಗಿ ಮಣ್ಣಿನ ಪರಿಕರಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಅಂಗಡಿ ಮುಂದೆ ಹಾಗೂ ರಸ್ತೆ ಮೇಲೆ ಹೀಗೆ ನೀರು ಹರಿದು ರಾಡಿ ಏರ್ಪಟ್ಟಿರುವ ಕಾರಣ ವ್ಯಾಪಾರಿಗಳ ಬದುಕು ಅಧೋಗತಿಗೆ ತಲುಪಿದೆ.

ಅದರಲ್ಲೂ ಮಳೆಗಾಲದಲ್ಲಿ ಈ ಮಡಿಕೆ ಕೇಳುವವರೇ ಅಪರೂಪ. ಇಂತಹ ಸಂದರ್ಭದಲ್ಲಿ ಹುಬ್ಬಳ್ಳಿ MLCP (Multi Level Car Parking Project) ಕಾಮಗಾರಿಯಲ್ಲಿ ಸಂಗ್ರಹವಾದ ನೀರನ್ನು ಹೀಗೆ ಪೈಪ್ ಮೂಲಕ ಹೊರಗೆ ಬಿಡಲಾಗುತ್ತಿದೆ.

ಪೈಪ್ ಮೂಲಕ ಬರುವ ನೀರು ಪಾಪ, ಮಣ್ಣಿನ ಪರಿಕರಗಳನ್ನು ಮಾರಾಟ ಮಾಡುವ ಈ ಬಡ ವ್ಯಾಪಾರಿಗಳ ಸಾಮಗ್ರಿಗಳ ಮುಂದೆ ಹರಿಯುತ್ತಿರುವ ಕಾರಣ ಜನರು ಕಲುಷಿತ ನೀರು, ತಗ್ಗು-ಗುಂಡಿ ತುಂಬಿದ ರಸ್ತೆಯ ಮಧ್ಯೆ ಇವರತ್ತ ಕಣ್ಣಾಡಿಸದೇ ಹೊರಟೇ ಬಿಡುತ್ತಾರೆ.

ಅದರಲ್ಲೂ ಧೂಳು ತುಂಬಿದ ನಗರದ ಹೃದಯಭಾಗದಲ್ಲಿ ನಿತ್ಯ ಕೂರುವ ಇವರ ಆರೋಗ್ಯ ಪರಿಸ್ಥಿತಿ ಹೀಗಿರಬೇಕು, ಒಮ್ಮೆ ಯೋಚಿಸಿ.

ಅಯ್ಯೋ! ಮಹಾನಗರ ಪಾಲಿಕೆ ಅಧಿಕಾರಿಗಳೇ, ಪಾಪ ಗುಡಿ ಕೈಗಾರಿಕೆ ಉಳಿವು ನಿಮ್ಮ ಕೈಯಲ್ಲಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/07/2026 04:55 pm

Cinque Terre

21.02 K

Cinque Terre

3

ಸಂಬಂಧಿತ ಸುದ್ದಿ