ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂಭಾಗದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರೇ ಎಚ್ಚರ! ಅಲ್ಲಿ ಸಂಚರಿಸಬೇಕಾದರೆ ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ, ಇಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಜಾಗದಲ್ಲಿ ಯಮಸ್ವರೂಪಿಯಾಗಿ ಕಬ್ಬಿಣದ ರಾಡ್‌ಗಳು ಎದ್ದು ನಿಂತಿವೆ.
ಹೌದು, ಪಾಲಿಕೆ ಎದುರು ಪ್ರಸ್ತುತ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾರ್ಪೊರೇಷನ್ ಆವರಣದೊಳಗೆ ಪ್ರವೇಶಿಸುವ ಮಾರ್ಗದ ಪಕ್ಕದಲ್ಲೇ ದೊಡ್ಡ ದೊಡ್ಡ ಕಬ್ಬಿಣದ ರಾಡ್‌ಗಳನ್ನು ತೆರೆದಿಡಲಾಗಿದೆ. ಆಕಸ್ಮಿಕವಾಗಿ ಯಾರಾದರೂ ಕಾಲು ಜಾರಿ ಬಿದ್ದರೆ ದೊಡ್ಡ ಅನಾಹುತ ಸಂಭವಿಸುವುದು ಖಚಿತ.
ಆದ್ದರಿಂದ, ಪಾಲಿಕೆ ಹಾಗೂ ಗುತ್ತಿಗೆದಾರರು ಕೂಡಲೇ ಎದ್ದು ನಿಂತಿರುವ ಈ ಕಬ್ಬಿಣದ ರಾಡ್‌ಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಜೀವಕ್ಕೆ ಕುತ್ತು ಉಂಟಾಗುವುದನ್ನು ತಪ್ಪಿಸಬೇಕಿದೆ.
Kshetra Samachara
04/08/2026 04:47 pm
LOADING...