ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಿನಂಪ್ರತಿ ವಾಹನ ಸವಾರರು ಪರದಾಡುವಂತಾಗಿದೆ. ಹುಬ್ಬಳ್ಳಿ ಸಮೀಪದ ನೂಲ್ವಿ ಕ್ರಾಸ್ ಬಳಿ ಅಂಡರ್‌ಪಾಸ್ ಸೇತುವೆ ನಿರ್ಮಿಸಲಾಗುತ್ತಿದೆ. ವಾಹನಗಳ ಸಂಚಾರಕ್ಕಾಗಿ ಸರ್ವಿಸ್ ರಸ್ತೆ ಇದೆಯಾದರೂ, ಇಡೀ ಸರ್ವಿಸ್ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದರೂ ಕ್ಯಾರೇ ಎನ್ನದೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇಂದು ಬರೋಬ್ಬರಿ ಒಂದು ಗಂಟೆಯ ಕಾಲ ಆಂಬುಲೆನ್ಸ್ ಸಿಲುಕಿ ಒದ್ದಾಡಿದ್ದಲ್ಲದೆ, ವಾಹನ ಸವಾರರೂ ತೀವ್ರ ಪರದಾಟ ನಡೆಸಿದರು. ಅಷ್ಟಕ್ಕೂ ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ನೀವೇ ನೋಡಿ...
ನೋಡಿದ್ರಲ್ಲ ವೀಕ್ಷಕರೇ, ಈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಷ್ಟೊಂದು ಅವಾಂತರ ಸೃಷ್ಟಿಯಾಗುತ್ತಿದೆ. ನೂಲ್ವಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ, ಇರುವ ರಸ್ತೆಯನ್ನು ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಲು ಸಹ ಇವರಿಗೆ ಯೋಗ್ಯತೆ ಇಲ್ಲವೇ...?
ಇಲ್ಲಿ ದಿನಂಪ್ರತಿ ಲಕ್ಷಾಂತರ ವಾಹನಗಳು ಓಡಾಡುತ್ತಿವೆ. ಆದರೂ ಈ ರಸ್ತೆ ನಿರ್ಮಿಸುತ್ತಿರುವ ಕಾಂಟ್ರಾಕ್ಟರ್‌ಗೆ ಈ ತಗ್ಗು-ಗುಂಡಿಗಳು ಕಾಣಿಸುತ್ತಿಲ್ಲವೇ? ಕೂಡಲೇ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿರುವ ತಗ್ಗು-ಗುಂಡಿಗಳಿಗೆ ಡಾಂಬರೀಕರಣ ಮಾಡಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಿದೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
04/08/2026 05:04 pm
LOADING...