ಧಾರವಾಡ: ಧಾರವಾಡದಲ್ಲಿ ಶಿಕ್ಷಣ, ಕೌಶಲ್ಯ ಮತ್ತು ವಿದ್ಯಾರ್ಥಿಗಳ ಪ್ರತಿಭೆಗೆ ಮತ್ತೊಂದು ವೇದಿಕೆ ಸಜ್ಜಾಗಿದೆ. ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಫೈರ್ & ಇಂಡಸ್ಟ್ರಿಯಲ್ ಸೇಫ್ಟಿ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿರುವ ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್ ತನ್ನ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ವಿದ್ಯಾರ್ಥಿಗಳ ಪ್ರತಿಭೆ, ಸಾಧನೆ ಹಾಗೂ ಸಂಸ್ಥೆಯ ಶೈಕ್ಷಣಿಕ ಪಯಣವನ್ನು ಅನಾವರಣಗೊಳಿಸುವ ವಿಶೇಷ ಕಾರ್ಯಕ್ರಮ ಜರುಗಿತು.
ವಿಜುಲ್ಸ್ ಪ್ಲೋ...
ಹೌದು,,, ಧಾರವಾಡದ ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್ ವತಿಯಿಂದ, NTTF ಪಕ್ಕದಲ್ಲಿನ ದೈವಜ್ಞ ಸಭಾ ಭವನದಲ್ಲಿ ಪ್ರೆಸ್ಟೀಜ್ ಇನ್ ಸ್ಟಿಟ್ಯೂಟ್ ವಾರ್ಷಿಕೋತ್ಸವದಲ್ಲಿ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಕೌಶಲ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.
ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಫೈರ್ & ಇಂಡಸ್ಟ್ರಿಯಲ್ ಸೇಫ್ಟಿ ವಿಭಾಗದ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಕೌಶಲ್ಯ, ತರಬೇತಿ ಅನುಭವ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನವೂ ನಡೆಯಿತು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರೆಸ್ಟೀಜ್ ಇನ್ ಸ್ಟಿಟ್ಯೂಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಇನ್ನೂ ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲಿ, ಫುಡ್ ಡಿಲಿವರಿ ಬಾಯ್ ಗಳಿಗೆ ಸನ್ಮಾನಿಸಿ ಸತ್ಕರಿಸಿದರು. ಈ ಇನ್ ಸ್ಟಿಟ್ಯೂಟ್ ನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೆಡಲ್ ಹಾಕಿ ಶುಭ ಹಾರೈಸಿದರು. ಅದೇ ರೀತಿ ಕೂಡ ಇಲ್ಲಿ ಕಲಿತು ಹೋಗಿ ಜಾಬ್ ಹತ್ತಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸತ್ಕರಿಸಿದರು. ಟ್ರೈನಿಂಗ್ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಿದರು. ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭ ಹಾರೈಸಿದರು.
ಸ್ಟೇಜ್ ಬೈಟ್ ಪ್ಲೋ.....(40 ಸೆಕೆಂಡ್ಸ್ ಓನ್ಲಿ)
ಪ್ರೆಸ್ಟೀಜ್ ಇನ್ ಸ್ಟಿಟ್ಯೂಟ್ ವತಿಯಿಂದ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಮಂತ ದೇಸಳ್ಳಿ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಟೂರಿಸಂ ಡಿಪಾರ್ಟ್ ಮೆಂಟ್, ಗೋವಿಂದಪ್ಪ ತೋರಂಗಟ್ಟಿ, ಡಿಸ್ಟ್ರಿಕ್ಟ್ ಫೈಯರ್ ಆಫೀಸರ್ ಧಾರವಾಡ,
ಸಂತೋಷ ಬಿ. HR ಮ್ಯಾನೇಜರ್ ಓಷಿಯನ್ ಫರ್ಲ್ ಧಾರವಾಡ, ಸುರೇಂದ್ರ ಗನಗೋಳ, EHS ಮ್ಯಾನೇಜರ್ ಏಕಸ್ ಕಂ. ಹುಬ್ಬಳ್ಳಿ. ವಿನಾಯಕ ಸಾವಟಗಿ, ಹೋಂಡಾ ಮೋಟರ್ಸ್ ಬೆಂಗಳೂರು. ವಿಕ್ರಮ್ ಕುಲಕರ್ಣಿ, ಡೆಪ್ಯೂಟಿ ಮ್ಯಾನೇಜರ್ EHS ಹುಬ್ಬಳ್ಳಿ. ರವಿಚಂದ್ರನ್ ಆರ್ ಮನ್ನೂರ, ಪ್ರೊಫೆಸರ್, ರಾಘವೇಂದ್ರ ಆನೆಗುಂದಿ, MD ಪ್ರೆಸ್ಟೀಜ್ ಇನ್ ಸ್ಟಿಟ್ಯೂಟ್ ಧಾರವಾಡ. ರುಬಿಯಾ ಮಕಂದರ್ HOD ಪ್ರೆಸ್ಟೀಜ್ ಇನ್ ಸ್ಟಿಟ್ಯೂಟ್ ಧಾರವಾಡ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇನ್ನು ವಿದ್ಯಾರ್ಥಿಗಳ ಪ್ರತಿಭೆ, ಸಾಧನೆ ಮತ್ತು ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿರುವ ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಧಾರವಾಡ ಸಜ್ಜಾಗಿದೆ. ಶಿಕ್ಷಣ ಮತ್ತು ಕೌಶಲ್ಯದ ಸಂಭ್ರಮವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/08/2026 08:14 am