ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅದ್ಧೂರಿ ಗುರುವಂದನೆ - ಊರೆಲ್ಲ ಗುರುಗಳ ಮೆರವಣಿಗೆ..

ಧಾರವಾಡ: ಕೇವಲ ಒಂದು ಬ್ಯಾಚಿನ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ನಮನ ಸಲ್ಲಿಸುವುದಕ್ಕಾಗಿ ಗುರುವಂದನೆ ಕಾರ್ಯಕ್ರಮ ಮಾಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, 1994-2005ರ ವರೆಗೆ ಒಂದೇ ಶಾಲೆಯಲ್ಲಿ ಕಲಿತ ಎಲ್ಲಾ ಬ್ಯಾಚಿನ ವಿದ್ಯಾರ್ಥಿಗಳು ಸೇರಿಕೊಂಡು ಗುರುವಂದನೆ ಮಾಡಿರುವುದನ್ನು ನಾವೆಲ್ಲೂ ನೋಡಿಲ್ಲ! ಇಂಥದ್ದೊಂದು ವಿಶೇಷ ಘಟನೆಗೆ ನವಲಗುಂದ ತಾಲೂಕಿನ ಶಿರಕೋಳ ಗ್ರಾಮ ಸಾಕ್ಷಿಯಾಗಿದೆ.

ಹೌದು, 1994ರಿಂದ 2005ರ ವರೆಗೆ ಒಂದೇ ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಸೇರುವ ಮೂಲಕ ಶಿರಕೋಳ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು. ಈ ಎಲ್ಲಾ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಒಂದಾಗಿ, ಪರಸ್ಪರ ತಾವೇ ದೇಣಿಗೆ ಸಂಗ್ರಹಿಸಿ ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಗುರುವಂದನೆ ಒಂದು ರೀತಿಯ ಮಾದರಿ ಕಾರ್ಯಕ್ರಮವೇ ಆಗಿದೆ.

ಬೃಹತ್ ಪೆಂಡಾಲ್ ವ್ಯವಸ್ಥೆ, ತರಹೇವಾರಿ ಅಡುಗೆ, ಗುರುಗಳ ಅದ್ಧೂರಿ ಮೆರವಣಿಗೆ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯಾದಾನ ಮಾಡಿದ ಗುರುಗಳಿಗೆ ಭಕ್ತಿಯ ನಮನ ಸಲ್ಲಿಸಿದ್ದಾರೆ.

ಶಿರಕೋಳ ಗ್ರಾಮದ ಬಸ್ ನಿಲ್ದಾಣದಿಂದ ಸಾರೋಟಿನ ಮೂಲಕ ಎಲ್ಲ ಗುರುಗಳ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಅಲ್ಲಿಂದ ಕಾರ್ಯಕ್ರಮದ ಮುಖ್ಯವೇದಿಕೆಗೆ ಎಲ್ಲಾ ಗುರುಗಳನ್ನು ಕರೆದುಕೊಂಡು ಬಂದು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. 1994-2005ರ ವರೆಗೆ ಕಲಿತ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಸೇರುವ ಮೂಲಕ ಶಿರಕೋಳ ಗ್ರಾಮದಲ್ಲಿ ಜಾತ್ರಾ ಸಂಭ್ರಮವನ್ನೇ ಸೃಷ್ಟಿ ಮಾಡಿದ್ದರು. ವಿದ್ಯಾರ್ಥಿಗಳೇ ಸ್ವತಃ ದೇಣಿಗೆ ಸಂಗ್ರಹಿಸಿ ಬೃಹತ್ ಮೊತ್ತದ ಈ ಮಾದರಿ ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/08/2026 05:56 pm

Cinque Terre

31.42 K

Cinque Terre

0

ಸಂಬಂಧಿತ ಸುದ್ದಿ