ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಮಗುವಿನ ಲೈಂಗಿಕ ಶೋಷಣೆ ಹಾಗೂ ನಿಂದನೆಯ (CSEAM) ವೀಡಿಯೊ ಹಂಚಿಕೊಂಡಿದ್ದ ಚಿಕ್ಕಮಗಳೂರಿನ ಯುವಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಟಿಪ್ಪು ನಗರದ ನಿವಾಸಿ ಅಶ್ಫನ್ (20) ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಸಾಮಾಜಿಕ ಜಾಲತಾಣವಾದ 'ಸ್ನ್ಯಾಪ್‌ಚಾಟ್' (Snapchat) ಖಾತೆಯ ಮೂಲಕ ಅಪ್ರಾಪ್ತ ಮಗುವಿನ ಖಾಸಗಿ ಅಂಗಗಳನ್ನು ತೋರಿಸುವ ಒಂದು ನಿಮಿಷದ ದೃಶ್ಯಾವಳಿಯಿದ್ದ ಲೈಂಗಿಕ ಕಿರುಕುಳದ ವಿಡಿಯೋವನ್ನು ಶೇರ್ ಮಾಡಿದ್ದ ಎನ್ನಲಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಶ್ರಮಿಸುವ ‘ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್‌ಪ್ಲೋಯಿಟೆಡ್ ಚಿಲ್ಡ್ರನ್’ (NCMEC) ಸಂಸ್ಥೆಯು ಸೈಬರ್ ಟಿಪ್‌ಲೈನ್ ವರದಿ ಮೂಲಕ ಭಾರತ ಸರ್ಕಾರದ NCRP ಪೋರ್ಟಲ್‌ಗೆ ಮಾಹಿತಿ ರವಾನಿಸಿತ್ತು.
ಪೋರ್ಟಲ್‌ನಲ್ಲಿ ಬಂದ ದೂರಿನ ತಾಂತ್ರಿಕ ವಿವರಗಳನ್ನು (IP ಅಡ್ರೆಸ್ ಹಾಗೂ ಮೊಬೈಲ್ ಸಂಖ್ಯೆ) ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಶ್ಫನ್ ವಿರುದ್ಧ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಕಲಂ 67(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ.
Kshetra Samachara
04/08/2026 09:25 pm
LOADING...