ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಮಾತನಾಡಿದ ಅವರು, ಇನ್ನು ಯಶವಂತರಾಯ ಗೌಡರು ಪಕ್ಷದಲ್ಲಿ ಹಿರಿಯ ನಾಯಕರು.
ಪಕ್ಷಕ್ಕೆ ಅವರ ಕೊಡುಗೆಯೂ ತುಂಬಾ ಇದೆ. ಬರುವ ದಿನಗಳಲ್ಲಿ ಯಶವಂತರಾಯ ಗೌಡರಿಗೆ ಉತ್ತಮ ಜವಾಬ್ದಾರಿ ಸಿಗುತ್ತದೆ.
ಯಶವಂತರಾಯ ಗೌಡರು ಪಕ್ಷದ ಆಸ್ತಿ, ರಾಜೀನಾಮೆ ಹಿಂದಕ್ಕೆ ಪಡೆಯಲು ಮನವಿ ಮಾಡುತ್ತೇನೆ. ಅಸಮಾಧಾನಿತ ಎಲ್ಲರೂ ಶಾಂತಿ- ತಾಳ್ಮೆಯಿಂದಿರಲು ವಿನಂತಿಸುತ್ತೇನೆ. ಶಾಸಕರು ತಮ್ಮ ಬೆಂಬಲಿಗರ ಮನವೊಲಿಸುವ ಕೆಲಸ ಮಾಡಬೇಕು. ಬೆಂಬಲಿಗರು ಬೀದಿಗೆ ಬಂದು ನಿಲ್ಲುವುದು, ಪಕ್ಷದ ರಾಜ್ಯ ಹಾಗೂ ಹೈಕಮಾಂಡ್ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ. ಶಾಸಕರು, ಬೆಂಬಲಿಗರು ಶಾಂತ ರೀತಿಯ ವರ್ತನೆ ಹೊಂದಬೇಕು.
ಎಲ್ಲರಿಗೂ ಬೆಂಬಲಿಗರು ಇರುತ್ತಾರೆ. ಇದರಿಂದ ವೈಮನಸ್ಸುಗಳು ಹೆಚ್ಚಾಗುತ್ತವೆ.
ಇದರಿಂದ ಪಕ್ಷಕ್ಕೂ ಹೊಡೆತ ಬೀಳುತ್ತದೆ. ಆರ್‌ಎಸ್‌ಎಸ್- ಬಿಜೆಪಿ ನಡೆಯ ವಿರುದ್ಧ ಹೋರಾಟ ಮಾಡುವ ಕಡೆ ನಾವು ತೊಡಗಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2026 04:27 pm
LOADING...