ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ಕಾಂಪೌಂಡ್ ಗೋಡೆ, ಚರಂಡಿ ಇದೀಗ ಅಕ್ಷರಶಃ ಕಸದ ತಾಣಗಳಾಗಿ ಮಾರ್ಪಟ್ಟಿದ್ದು ಕೆಲವೆಡೆ ಮೀತಿ ಮೀರಿದ ಅವ್ಯವಸ್ಥೆ ಇದೆ.
ಹೌದು ! ಇದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ -45 ರ ಬಳಿಯ ಕ್ಯಾಥೋಲಿಕ್ ಸಿಮೆಟರಿ (ಕ್ರಿಶ್ಚಿಯನ್ ಶ್ಮಶಾನ) ಗೋಡೆ ಸುತ್ತ ಕಸ, ಕಡ್ಡಿ, ಪ್ಲಾಸ್ಟಿಕ್, ಅನೈರ್ಮಲ್ಯ ತುಂಬಿ ದುರ್ವಾಸನೆ ತಲೆ ದೋರಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ-6 ವ್ಯಾಪ್ತಿಯಲ್ಲಿರುವ ಕ್ಯಾಥೋಲಿಕ್ ಸಿಮೆಟರಿ ಗೋಡೆ ಪಕ್ಕದಲ್ಲೇ ಕಸ ಸುರಿಯಲಾಗಿದ್ದು, ಕೆಲೆವೆಡೆ ಚರಂಡಿ ಬ್ಲಾಕ್ ಆಗಿದೆ.
ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ವಿಷಯ ತಿಳಿಸಿ ಸ್ಥಳೀಯ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಉಪಲವಯ ಆಯುಕ್ತರು ಸ್ವಚ್ಛತೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 10:09 pm
LOADING...