ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿನಗರದಲ್ಲಿ '100 ದಿನಗಳ ಕನಸು' - ನೂತನ ವೆಬ್ಸೈಟ್ ಮೂಲಕ ಮೇಯರ್ 'ಅಭಿವೃದ್ಧಿ' ಮಾದರಿ..!

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಡಳಿತವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ಯಬೇಕು ಎಂಬುದಲ್ಲದೇ, ಹು-ಧಾ ಅವಳಿನಗರದ ಸಮಗ್ರ ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ- ಧಾರವಾಡದ ನೂತನ ಮೇಯರ್ 'ನೂರು ದಿನಗಳ ಕನಸು' ಎಂಬ ವಿನೂತನ ಶೈಲಿಯ ವೆಬ್‌ಸೈಟ್ ಆರಂಭಿಸುತ್ತಿದ್ದಾರೆ.

ಶೀಘ್ರದಲ್ಲಿ ಈ ವಿಶಿಷ್ಟ ವೆಬ್ ಸೈಟ್ ಲೋಕಾರ್ಪಣೆ ಆಗಲಿದೆ. 10 ನೇ ತರಗತಿವರೆಗೆ ಓದಿರುವ ಮೇಯರ್ ದುರ್ಗಮ್ಮ ಬೆಜವಾಡ, ತಮ್ಮ ಅಧಿಕಾರದ ಒಂದು ವರ್ಷದ ಅವಧಿಯಲ್ಲಿ ಅವಳಿ ನಗರದ‌ ಸಮಗ್ರ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹರಿಸಲು ಮುಂದಾಗಿರುವುದೇ ನೂತನ ವೆಬ್ ಸೈಟ್ ಅಭಿವೃದ್ಧಿಪಡಿಸಲಾಗಿದೆ.

ವಿನೂತನ ಕಾರ್ಯಕ್ರಮದಲ್ಲಿ ನಗರದ ಸ್ವಚ್ಛತೆ, ಫುಟ್‌ಪಾತ್ ಅಕ್ರಮ ತೆರವು, ಎಲ್‌ಇಡಿ ವಿದ್ಯುತ್ ದೀಪ ಅಳವಡಿಕೆ, ಗುಂಡಿ ಮುಕ್ತ ರಸ್ತೆ, ನೀರು ಪೂರೈಕೆ, ರಸ್ತೆ ಸುರಕ್ಷತೆ, ಒಳ ಚರಂಡಿ ಸ್ವಚ್ಛತೆ ಸೇರಿದಂತೆ ಹತ್ತು ಹಲವು ಸೌಕರ್ಯಗಳನ್ನು ಒದಗಿಸುವ ಯೋಜನೆ ರೂಪಿಸಿದ್ದಾರೆ. ವೆಬ್‌ಸೈಟ್ ಮುಖ ಪುಟದಲ್ಲಿ ಮೇಯರ್ ದುರ್ಗಮ್ಮ ಬೆಜವಾಡ ಅವರ ಕುರಿತು ಮಾಹಿತಿ ಇರಲಿದೆ. ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಯಾವುದೇ ಸಮಸ್ಯೆಗಳಿದ್ದರೂ ವೆಬ್‌ಸೈಟ್ ಗೆ ಭೇಟಿ ನೀಡಿ ಅಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ, ವಾರ್ಡ್‌ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಬರೆದು, ಫೋಟೋ ಸಮೇತ ದೂರು ನೀಡಲು ಅವಕಾಶವಿದೆ. ಮೇಯರ್ ಸ್ವತಃ ಆ ಸಮಸ್ಯೆಗಳನ್ನು ಅವಲೋಕಿಸಿ, ತಕ್ಷಣವೇ ಸ್ಪಂದಿಸಿ ಪರಿಹಾರ ಒದಗಿಸಲಿದ್ದಾರೆ‌.

ಇನ್ನು ಮೇಯರ್ ಜೊತೆ ಮಾತು ಕತೆ, ಫೋನ್‌ ಇನ್ ಕಾರ್ಯಕ್ರಮ, ವಲಯ ಕಚೇರಿ ಭೇಟಿಯ ಸಮಯದ ಸಂಪೂರ್ಣ ಮಾಹಿತಿ ಇದೇ ತಾಣದಲ್ಲಿ ಸಿಗಲಿದೆ. ನಗರದ ಅಭಿವೃದ್ಧಿ, ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಪರಿಸರ ಜಾಗೃತಿ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಇಲ್ಲಿ ಸಿಗಲಿದೆ. ಸಾರ್ವಜನಿಕರು ಪಾಲಿಕೆ ವಾಟ್ಸ್‌ಆಪ್ ಸಂಖ್ಯೆಗೆ ಫೋಟೋ ಕಳುಹಿಸಿ ಸಮಸ್ಯೆಗಳ ಹೇಳಿಕೊಳ್ಳುವ ವ್ಯವಸ್ಥೆಯು ಈಗ ಲಭ್ಯ ಇದೆ. ಆದರೆ, ಇದು ಅಧಿಕಾರಿಗಳ ಹಂತದಲ್ಲಿ ಇರುವುದರಿಂದ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನೂತನ ಮೇಯರ್ ವೆಬ್ ಸೈಟ್ ಆರಂಭಿಸಲು ಮುಂದಾಗಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/08/2026 10:53 pm

Cinque Terre

7.01 K

Cinque Terre

3

ಸಂಬಂಧಿತ ಸುದ್ದಿ