ಶಿವಮೊಗ್ಗ : ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ನೂತನ ಎಸ್‌ಪಿಯಾಗಿ ಆಂಟನಿ ಜಾನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಎಸ್. ಕೌಲಾಪೂರೆ ಅವರು ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಆಂಟನಿ ಜಾನ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.
ಅಧಿಕಾರ ವಹಿಸಿಕೊಂಡ ತಕ್ಷಣ ಸಾರ್ವಜನಿಕರಿಗೆ ಪ್ರಮುಖ ಸಂದೇಶ ನೀಡಿರುವ ನೂತನ ಎಸ್‌ಪಿ ಆಂಟನಿ ಜಾನ್, ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಕೆಲಸ-ಕಾರ್ಯಗಳಲ್ಲಿ ಅನಗತ್ಯ ವಿಳಂಬ ಧೋರಣೆ ತೋರುವುದು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ದುರುಪಯೋಗ ಅಥವಾ ಯಾವುದೇ ರೀತಿಯ ಭ್ರಷ್ಟಾಚಾರ ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ದೂರು ನೀಡಬಹುದು. ಸೂಕ್ತ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಿ ದೂರು ಸಲ್ಲಿಸಲು ಕೋರಲಾಗಿದೆ.
ಸಾರ್ವಜನಿಕರು ಯಾವುದೇ ದೂರು, ದೂರುಗಳ ಸ್ಥಿತಿ ಅಥವಾ ಜ್ವಲಂತ ಮಾಹಿತಿಯನ್ನು ನೇರವಾಗಿ ಹಂಚಿಕೊಳ್ಳಲು ಲೋಕಾಯುಕ್ತ ಎಸ್‌ಪಿ ಅವರ ಮೊಬೈಲ್ ಸಂಖ್ಯೆ 93640-62525 ಅನ್ನು ಸಂಪರ್ಕಿಸಬಹುದು.
PublicNext
17/09/2026 07:29 pm
LOADING...