ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಗರಿಬೊಮ್ಮನಹಳ್ಳಿ: ಎಕ್ಸೆಲ್ ಕಟ್ ಆಗಿ ರಸ್ತೆ ಬದಿ ಕಂದಕಕ್ಕೆ ವಾಲಿದ ಬಸ್, 30 ಪ್ರಯಾಣಿಕರು ಸೇಫ್

ಹಗರಿ ಬೊಮ್ಮನಹಳ್ಳಿ : ಚಾಲಕನ ಸಮಯ ಪ್ರಜ್ಞೆಯಿಂದಾಗಿ 30 ಜೀವಗಳು ಬದುಕಿದಂತಾಗಿದೆ. ಎಕ್ಸೆಲ್ ಕಟ್ ಆಗಿ ಅಪಾಯದ ಅಂಚಿನಲ್ಲಿದ್ದ ಬಸ್ಸನ್ನ ಡ್ರೈವರ್ ರಸ್ತೆ ಬದಿ ಸೇಫ್ ಆಗಿ ನಿಲ್ಲಿಸಿ ಪ್ಯಾಸೆಂಜರ್ ಗಳನ್ನ ಕಾಪಾಡಿದ್ದಾನೆ‌. ಇದ್ರಿಂದ 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಡ್ರೈವರ್ ಗೆ ಮೇಜರ್ ಗಾಯ ಆಗಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಹಗರಿ ಬೊಮ್ಮನಹಳ್ಳಿಯಿಂದ ತಂಬ್ರಹಳ್ಳಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನ ಆಕ್ಸಲ್ ಕಟ್ ಆಗಿ ರಸ್ತೆ ಬದಿ ವಾಲಿ ನಿಂತಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಿಲ್ಲ. ಸ್ಥಳಕ್ಕೆ ವಿಜಯನಗರ ಕೆಎಸ್‌ಆರ್‌ಟಿಸಿ ಡಿಸಿ ರಾಜೇಶ್ ಹುದ್ಧಾರ್, ಹಗರಿಬೊಮ್ಮನ ಹಳ್ಳಿ ಸಿಪಿಐ ವಿಕಾಸ್ ಲಮಾಣಿ, ತಂಬ್ರಳ್ಳಿ ಪಿಎಸ್ ಐ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By :
PublicNext

PublicNext

18/09/2026 06:04 pm

Cinque Terre

5.75 K

Cinque Terre

0

ಸಂಬಂಧಿತ ಸುದ್ದಿ