ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ: ಯುಪಿಐ ಶುಲ್ಕ ಹೆಚ್ಚಳ ಮಾಡಿ ಕೇಂದ್ರ ಜನರ ಜೇಬಿಗೆ ಕತ್ತರಿ ಹಾಕೋ ಕೆಲಸ ಮಾಡ್ತಿದೆ – ಇ.ತುಕಾರಾಂ

ಕೂಡ್ಲಿಗಿ : ಕೇಂದ್ರ ಸರ್ಕಾರ ಯುಪಿಐ ಶುಲ್ಕ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಶ್ ಡಿಜಿಟಲೀಕರಣ ಮಾಡಿದ್ದರಿಂದ ಯುಪಿಐ ಟ್ರಾನ್ಸಾಕ್ಷನ್ ಹೆಚ್ಚಾಗಿದೆ. ದೇಶದಲ್ಲಿ ಜನಸಾಮಾನ್ಯರು ನಗದು ವಹಿವಾಟು ನಡೆಸ್ತಿದ್ರು, ಆಗ ನಮ್ಮ‌ ದೇಶದ ಜಿಡಿಪಿ ದರ ಚೆನ್ನಾಗಿತ್ತು. ಇವ್ರು ಡಿಜಿಟಲೀಕರಣ ಮಾಡಿದ್ದರಿಂದ ಇವತ್ತು ಕ್ಯಾಶ್ ಚಲಾವಣೆ ಪ್ರಮಾಣ ಕಡಿಮೆ ಆಗಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ತುಕಾರಾಂ ವಾಗ್ದಾಳಿ ನಡೆಸಿದ್ರು.

ಕೂಡ್ಲಿಗಿಯಲ್ಲಿ ಮಾತಾಡಿದ ಅವರು, ಫೋನ್ ಪೇ, ಪೇಟಿಎಂ ಯುಪಿಐ ಮೂಲಕ ಇವತ್ತು ಡಿಜಿಟಲೀಕರಣ ಮಾಡಿದ್ದರಿಂದ ನಮ್ಮ ಜಿಡಿಪಿ ಕುಸಿಯುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ನರೇಗಾ ಯೋಜನೆ ತಂದು ನೇರವಾಗಿ ಜನರ ಕೈಗೆ ಹಣವನ್ನ ಕೊಡುವ ಕೆಲಸ‌ ಮಾಡಿದ್ವಿ. ಈಗ ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಜನಸಾಮಾನ್ಯರ ಕೈಗೆ ಹಣ ನೀಡ್ತಾ ಇದ್ದೇವೆ. ಅದು ನಗದು ಚಲಾವಣೆ ಆಗ್ತದೆ. ಸರ್ಕಾರಗಳಿಗೆ ತೆರಿಗೆ ಬರುತ್ತೆ, ಅದು ನಮ್ಮ‌ ದೇಶದ ಜಿಡಿಪಿ ಬೆಳವಣಿಗೆ ಹೆಚ್ಚಳವಾಗುತ್ತೆ‌. ಈಗ ಕೇಂದ್ರ ಸರ್ಕಾರ ಯುಪಿಐ ಶುಲ್ಕ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕೋ ಕೆಲಸ ಮಾಡ್ತಿದೆ ಅಂತ ವ್ಯಂಗ್ಯವಾಡಿದ್ರು.

Edited By : Somashekar
PublicNext

PublicNext

18/09/2026 07:53 pm

Cinque Terre

5.46 K

Cinque Terre

0

ಸಂಬಂಧಿತ ಸುದ್ದಿ