", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1750935716-18.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಮಕ್ಕಳನ್ನ ನೋಡಿದ ಮೇಲೆ ದೇವರನ್ನ ನೋಡೋ ಅವಶ್ಯಕತೆ ಇಲ್ಲ. ದೇವರ ಗುಡಿ, ಶಾಲೆ ಇದ್ರೆ ನಾನು ಶಾಲೆಗೆ ಹೋಗ್ತೀನಿ ಅಂತ ನಮ್ಮ ಗುರುಗಳು ಹೇ...Read more" } ", "keywords": "Hospet comedy show, Abhinava Gavishree, Kannada drama, social commentary, humorous dialogue.", "url": "https://dashboard.publicnext.com/node" }
ಹೊಸಪೇಟೆ : ಮಕ್ಕಳನ್ನ ನೋಡಿದ ಮೇಲೆ ದೇವರನ್ನ ನೋಡೋ ಅವಶ್ಯಕತೆ ಇಲ್ಲ. ದೇವರ ಗುಡಿ, ಶಾಲೆ ಇದ್ರೆ ನಾನು ಶಾಲೆಗೆ ಹೋಗ್ತೀನಿ ಅಂತ ನಮ್ಮ ಗುರುಗಳು ಹೇಳ್ತಿದ್ರು ಅಂತ ಕೊಪ್ಪಳದ ಗವಿಶ್ರೀಗಳು ಹೇಳಿದ್ರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮದಲ್ಲಿ ಮಾತಾಡಿದ ಶ್ರೀಗಳು, ದೇವಸ್ಥಾನಕ್ಕೆ ಹೋದ್ರೆ ಒಬ್ಬ ದೇವರನ್ನು ನೋಡಬಹುದು. ಶಾಲೆಗೆ ಹೋದ್ರೆ ಸಾವಿರಾರು ದೇವರನ್ನ ನೋಡಬಹುದು. ಮಕ್ಕಳ ಮನಸ್ಸು ತಿಳಿಯಾಗಿರ್ತದೆ, ಮಕ್ಕಳು ದೊಡ್ಡವರಿಗೂ ಕಲಿಸ್ತಾರೆ ಕೂಡ. ಕುಡಿಯಲಾರದವರು, ಇಸ್ಪೀಟ್ ಆಡದವರು ಇಲ್ಲಿ ಸೇರಿದ್ದೀರಿ. ಇಸ್ಪೀಟ್ ಆಡೋರು, ಕುಡಿಯುವವರು ಇನ್ನೆಲ್ಲೋ ಇದ್ದಾರೆ ಅಂತ ಹೇಳಿದ್ರು. ಅಷ್ಟೇ ಅಲ್ಲದೇ ಮೊಬೈಲ್ ಮತ್ತು ಪುಸ್ತಕದ ಕಥೆ ಹೇಳಿದ ಶ್ರೀಗಳು, ಮನೆಗೆ ಕುಡಿದು, ಗುಟಕಾ ಹಾಕೊಂಡು ಬಂದ್ರೆ, ನೀವೇ ಕೈ ಮುಗಿದು ಇವೆಲ್ಲ ಬಿಟ್ಟು ಬಿಡಿ ಅಂತ ತಿಳಿ ಹೇಳಿ. ಮಕ್ಕಳೇ ಬೆಸ್ಟ್ ಟೀಚರ್, ಬೆಸ್ಟ್ ಫ್ಯೂಚರ್ ಆಗಿದ್ದೀರಿ. ಹೀಗಾಗಿ ಜನ ವ್ಯಸನಮುಕ್ತ ಆಗಬೇಕು. ತಂದೆ- ತಾಯಿಯ ಆಸ್ತಿ ಕೇಳೋರು ಮಕ್ಕಳಲ್ಲ, ತಂದೆ- ತಾಯಿಯ ಆದರ್ಶ ಕೇಳೋರು ನಿಜವಾದ ಮಕ್ಕಳು ಅಂತ ಶ್ರೀಗಳು ಹೇಳಿದ್ರು.
PublicNext
26/06/2025 04:15 pm