", "articleSection": "Education,News", "image": { "@type": "ImageObject", "url": "https://prod.cdn.publicnext.com/s3fs-public/421698-1751287348-Youtube-HD.00_54_40_02.Still2537~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shrikanth Munavachari Navalgund" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ಲಿಂಗೈಕ್ಯ ಬಸವಣ್ಣಜ್ಜನವರ 98ನೇ ಜನ್ಮದಿನದ ಅಂಗವಾಗಿ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ವಿಶೇಷಚೇತನ ಮಕ್ಕಳ ಜೊತೆ ಬೆರೆತು ಅವರೊಡನೆ ...Read more" } ", "keywords": "Kundagol Abhinava Shree, Abhinava Shree specially-abled children, hand-feeding special needs kids, meaningful birth anniversary Lingaikya, Kundagol children with disabilities, Abhinava Shree social work, Lingaikya memorial birthday, Kundagol philanthropy, support for disabled children, Abhinava Shree charity", "url": "https://dashboard.publicnext.com/node" }
ಕುಂದಗೋಳ : ಲಿಂಗೈಕ್ಯ ಬಸವಣ್ಣಜ್ಜನವರ 98ನೇ ಜನ್ಮದಿನದ ಅಂಗವಾಗಿ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ವಿಶೇಷಚೇತನ ಮಕ್ಕಳ ಜೊತೆ ಬೆರೆತು ಅವರೊಡನೆ ಶ್ರೀಗಳ ಜನುಮದಿನ ಆಚರಣೆ ಮಾಡಿ ವಿಶೇಷಚೇತನ ಮಕ್ಕಳು ಸರ್ವರಲ್ಲಿ ಶ್ರೇಷ್ಠರು ಎಂಬ ಸಂದೇಶ ಸಾರಿದ್ದಾರೆ.
ಹೌದು ! ತ್ರಿವಿಧ ದಾಸೋಹಿ ಲಿಂಗೈಕ್ಯ ಬಸವಣ್ಣಜ್ಜನವರ 98ನೇ ಜನ್ಮದಿನದ ಅಂಗವಾಗಿ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಹುಬ್ಬಳ್ಳಿ ನಗರದ ಗಬ್ಬೂರಿನಲ್ಲಿರುವ ವಿಶೇಷಚೇತನರ ವಾಸಕ್ಕೆ ಭೇಟಿ ನೀಡಿ ಅವರಿಂದಲೇ ಕೇಕ್ ಕತ್ತರಿಸಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣಜ್ಜನವರ ಜನ್ಮದಿನ ಆಚರಿಸಿದ್ದಾರೆ.
ಗಬ್ಬೂರಿನಲ್ಲಿರುವ ವಿಶೇಷಚೇತನರ ವಾಸದ ಮಕ್ಕಳಿಗೆ ಸಿಹಿ, ಖಾದ್ಯದ ಪ್ರಸಾದದ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ದೈಹಿಕ ನ್ಯೂನ್ಯತೆ ದೇಹಕ್ಕೆ ಅಷ್ಟೇ, ಮನಸ್ಸಿಗಲ್ಲ ಮನಸ್ಸು ನಿರ್ಮಲವಾದರೇ ಬದುಕು ಶ್ರೇಷ್ಠ ದೈಹಿಕ ನ್ಯೂನ್ಯತೆ ಇದ್ದವರು ಅಂಗವಿಕಲರಲ್ಲ ನೀವೂ ವಿಶೇಷ ಚೇತನರು ಎಂದಿದ್ದಾರೆ.
ಈ ಸಂದರ್ಭದಲ್ಲಿ ವಿಶೇಷಚೇತನ ಮಕ್ಕಳಿಗೆ ತಮ್ಮ ಕೈಯಾರ ಪ್ರಸಾದ ತಿನಿಸಿದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಭಕ್ತರ ಮನ ಗೆದ್ದರು. ಈ ಸಂದರ್ಭದಲ್ಲಿ ಭಕ್ತರು ಹಾಗೂ ವಿಶೇಷಚೇತನರು ಉಪಸ್ಥಿತರಿದ್ದರು.
Kshetra Samachara
30/06/2025 06:12 pm