ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಗ್ರಾಮಾಭಿವೃದ್ಧಿಗೆ ಪಣತೊಟ್ಟ ಯುವಕರ ಯಶೋಗಾಥೆ ಇದು

ಅಣ್ಣಿಗೇರಿ: ಯುವಕರು ಮನಸ್ಸು ಮಾಡಿದರೆ ಒಂದು ಪುಟ್ಟ ಗ್ರಾಮ ದೇಶಾದ್ಯಂತ ಭಾರಿ ಸದ್ದು ಮಾಡುವುದಂತೂ ಸತ್ಯ. ಹೀಗೆ ಹೊಸ ವರ್ಷದಂದು ಹೊತ್ತಿದ ಗ್ರಾಮಾಭಿವೃದ್ಧಿಯ ಕಿಚ್ಚು ಈಗ ಎಲ್ಲರ ಗಮನ ಸೆಳೆಯುವಂತೆ ಪ್ರಜ್ವಲಿಸುತ್ತಿದೆ.

ಹೌದು.. ಇದು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಯುವಕರ ಯಶೋಗಾಥೆ... ಶ್ರೀ ಗುರುಶಾಂತೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ 'ಗುರುವಂದನಾ' ಕಾರ್ಯಕ್ರಮಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಆಗಮಿಸುತ್ತಿದ್ದಾರೆ. ಹೀಗಾಗಿ 'ನಿಸ್ವಾರ್ಥ ಸೇವೆಯೇ ನಮ್ಮ ಧ್ಯೇಯ' ಎಂಬ ಘೋಷ ವಾಕ್ಯದೊಂದಿಗೆ ಶಲವಡಿ ಗ್ರಾಮದ ಗೆಳೆಯರ ಬಳಗದ ಸದಸ್ಯರು, ಯುವಕರು, ಹಿರಿಯರು ಸೇರಿ ಸರ್ಕಾರಿ ಶಾಲೆ, ಬಸ್ ನಿಲ್ದಾಣವನ್ನು ಸ್ವಚ್ಛಗಳೊಸಿ ಬಣ್ಣ ಹಚ್ಚಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನು ಬಸ್ ನಿಲ್ದಾಣ ಮುಂದೆ ಕುಳಿಕೊಳ್ಳಲು ಆಸದ ವ್ಯವಸ್ಥೆ, ಗಿಡ ನೆಟ್ಟು ಪುಟಾಣಿ ಗಾರ್ಡನ್ ಕೂಡ ಮಾಡಿದ್ದಾರೆ.

ಗ್ರಾಮವು ಈಗ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಗವಿಸಿದ್ದೇಶ್ವರ ಶ್ರೀಗಳ ಆಗಮನದ ತಂಗಾಳಿ ಗ್ರಾಮದಲ್ಲಿ ಹೊಸ ಚೈತನ್ಯ, ಹುರುಪನ್ನು ತಂದಿದೆ. ಗ್ರಾಮದ ಅಭಿವೃದ್ಧಿ ಹೀಗೆ ಮುದುವರಿಯಲಿ ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ...

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/01/2026 08:17 am

Cinque Terre

42.12 K

Cinque Terre

0

ಸಂಬಂಧಿತ ಸುದ್ದಿ