ಶಿರಸಿ: ಮನೆಯಲ್ಲಿ ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯುತಿದ್ದ ಮಗನಿಗೆ ತಾಯಿ ಬುದ್ದಿವಾದ ಹೇಳಿದ್ದಕ್ಕೆ ಮಗ ತಾಯಿಗೆ ಎದರು ಉತ್ತರ ಕೊಟ್ಟಿದ್ದ .ಈ ಹಿನ್ನಲೆಯಲ್ಲಿ ತಾಯಿ ಮಗನಿಗೆ ಎರಡು ಹೊಡತ ಕೊಟ್ಟು ಓದಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗಣೇಶನಗರದಲ್ಲಿ ಸಂಬವಿಸಿದೆ.
ಈ ವಿಚಾರವಾಗಿ ಮನನೊಂದ ವಿದ್ಯಾರ್ಥಿ ತಂದೆ ತಾಯಿ ಮನೆಯಲ್ಲಿ ಇಲ್ಲದೇ ಇರುವ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ತಕ್ಷಣಕ್ಕೆ ಆತನ್ನು ಟಿ.ಎಸ.ಎಸ್. ಆಸ್ಪತ್ರೆಗೆ ದಾಖಲಿಸಿದರೂ ಚಿಕತ್ಸೆ ಫಲಿಸದೇ ಮೃತನಾಗಿದ್ದಾನೆ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
13/03/2026 11:10 pm
LOADING...