ಭಟ್ಕಳ: ಭಟ್ಕಳದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 9 ಲಕ್ಷ ರೂ. ಮೌಲ್ಯದ 9 ಜಾನುವಾರುಗಳನ್ನು ರಕ್ಷಿಸಲಾಗಿದೆ.
ಆರೋಪಿಗಳ ಗುರುತು ಮತ್ತು ಉದ್ದೇಶ
ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಜಾಗಟೇಬಾಲ್ ಪ್ರದೇಶದ ಮ್ಯಾಂಗೋ ಫಾರ್ಮ್ ಹತ್ತಿರ ವಾಸವಾಗಿರುವ 36 ವರ್ಷದ ಮುಸದ್ದೀಕ್ (ತಂದೆ ಅಬ್ದುಲ್ ರೆಹಮಾನ) ಹಾಗೂ ಇತರರು ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿತರು ವಾಹನವೊಂದರಲ್ಲಿ ಈ 9 ಜಾನುವಾರುಗಳನ್ನು ಖರೀದಿಸಿ ಭಟ್ಕಳಕ್ಕೆ ಸಾಗಿಸಿ ಕಟ್ಟಿಹಾಕಿದ್ದರು. ಪೊಲೀಸರ ದಾಳಿ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ.
ಕಾನೂನು ಕ್ರಮ
ಈ ಸಂಬಂಧ ಗ್ರಾಮೀಣ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
20/03/2026 09:22 pm
LOADING...