ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧಿಸಿದ ಗ್ರಾಮೀಣ ಪೋಲಿಸರು

ಶಿರಸಿ : ಗ್ರಾಮೀಣ, ಬನವಾಸಿ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಿಗೆ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿ ಕಾಡಿನಲ್ಲಿ ಮರೆಯಾಗುತ್ತಿದ್ದ ಕುಖ್ಯಾತ ಆರೋಪಿ ತಾಲೂಕಿನ ಮಳಲಿ ಗ್ರಾಮದ ಅರುಣ@ಅರ್ಜುನ್ ಲಕ್ಷ್ಮಣ ಗೌಡಾ (28) ಎಂಬಾತನನ್ನು ಶಿರಸಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಯ ವಿರುದ್ಧ ಪೊಕ್ಸೊ, ಬಲತ್ಕಾರ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ, ವಂಚನೆ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯಕರ ಭಾವಚಿತ್ರಗಳನ್ನು ಪೋಸ್ಟ್ ಮಾಡುವಂತಹ ಹಲವು ಗಂಭೀರ ಆರೋಪಗಳು ದಾಖಲಾಗಿದ್ದವು.

ಪೊಲೀಸರು ಈತನನ್ನು ಹಿಡಿಯಲು ಹೋದಾಗಲೆಲ್ಲಾ ಅವರ ಮೇಲೆ ಹಲ್ಲೆ ಮಾಡಿ ಕಾಡಿನಲ್ಲಿ ಮರೆಯಾಗುವುದು ಈತನ ಚಾಳಿಯಾಗಿತ್ತು. ಈತನನ್ನು ಬಂಧಿಸಲು ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ, ಸಿಪಿಐ ರಮೇಶ ಹೂಗಾರ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಸಂತೋಷಕುಮಾರ ಎಂ, ಅಶೋಕ ರಾಠೋಡ, ಎಎಸ್ಐ ಪ್ರಕಾಶ ತಳವಾರ ಹಾಗೂ ಸಿಬ್ಬಂದಿಗಳಾದ ವಿಘ್ನೇಶ್ವರ ಹೆಗಡೆ, ಮಾಂತೇಶ ಬಾರಕೆರ್, ಅಶೋಕ ನಾಯ್ಕ, ಅಭಿಷೇಕ ಆರ್, ಅರುಣಕುಮಾರ ವಿ, ಗಣಪತಿ ನಾಯ್ಕ, ವೆಂಕಟರಮಣ ನಾಯ್ಕ, ದಾವಲಸಾಬ ಕುಂದಿ ಮತ್ತು ಮಾರುತಿ ಗೌಡಾ ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

15/03/2026 06:53 pm

Cinque Terre

6.94 K

Cinque Terre

0

ಸಂಬಂಧಿತ ಸುದ್ದಿ