ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸಿದ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಜಾಗಟೇಬಾಲ್ ಪ್ರದೇಶದ ಮ್ಯಾಂಗೋ ಫಾರ್ಮ್ ಹತ್ತಿರ ವಾಸವಾಗಿರುವ ಮುಸದ್ದೀಕ್ (36), ತಂದೆ ಅಬ್ದುಲ್ ರೆಹಮಾನ ಹಾಗೂ ಇತರರು ಸೇರಿ, ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಜಾನುವಾರುಗಳನ್ನು ಸಾಗಾಟ ಮಾಡಿರುವುದು ತಿಳಿದುಬಂದಿದೆ.
ಆರೋಪಿತರು ಸುಮಾರು 9 ಲಕ್ಷ ರೂ. ಮೌಲ್ಯದ 9 ಜಾನುವಾರುಗಳನ್ನು ಯಾವುದೋ ವಾಹನದಲ್ಲಿ ಖರೀದಿ ಮಾಡಿ ಭಟ್ಕಳಕ್ಕೆ ಸಾಗಾಟ ಮಾಡಿ ಕಟ್ಟಿ ಹಾಕಿರುವಾಗ, ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ.
ಈ ಬಗ್ಗೆ ಗ್ರಾಮಿಣ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ.
ಕೈಗೊಂಡಿದ್ದಾರೆ.
Kshetra Samachara
20/03/2026 09:27 pm
LOADING...