ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅತಂತ್ರ ! ಬಾರದ ಕಲ್ಯಾಣಾಧಿಕಾರಿ

ಕುಂದಗೋಳ : 275 ವಿದ್ಯಾರ್ಥಿಗಳು, 5 ವಸತಿ ನಿಲಯ ಗಳು ಸೇರಿದಂತೆ ಇಲಾಖೆ ಜವಾಬ್ದಾರಿ ನಿರ್ವಹಿಸಬೇಕಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿಗಳ ಹುದ್ದೆ ಸದ್ಯಕ್ಕೆ ಖಾಲಿ ಇದೆ.

ಎಸ್.! ವೀಕ್ಷಕರೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಂದಗೋಳ ತಾಲೂಕಿನಲ್ಲಿ ಒಟ್ಟು 5 ಹಾಸ್ಟೇಲ್ ಒಳಗೊಂಡಿದೆ, ಅದರಲ್ಲಿ ಕಮಡೊಳ್ಳಿ ಗ್ರಾಮದಲ್ಲಿನ ಹಾಸ್ಟೇಲ್ ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಬಂದ್ ಆಗಿದೆ ಎನ್ನಲಾಗಿದೆ.

ಬಾಕಿ ಉಳಿದ 4 ವಸತಿ ನಿಲಯಗಳು, 275 ವಿದ್ಯಾರ್ಥಿಗಳಿಗೆ ಸಮರ್ಪಕ ವ್ಯವಸ್ಥೆ ಮತ್ತು ಕಚೇರಿ ಆಡಳಿತ ನಡೆಸಬೇಕಾದ ಕಲ್ಯಾಣಾಧಿಕಾರಿಗಳ ಹುದ್ದೆಗೆ 2026 ಫೆಬ್ರವರಿ,5 ರಂದು ನಿಯೋಜನೆ ಮೇರೆಗೆ ಶೀತಲ್ ಹೊಂಗಲ್ ಎನ್ನುವವರನ್ನು ನೇಮಿಸಲಾಗಿದ್ದು ಅವರು ಹುದ್ದೆ ವಹಿಸಿಕೊಂಡು ಪುನಃ ಕಚೇರಿ ಎಡೆಗೆ ತಲೆನೆ ಹಾಕಿಲ್ಲಾ.

ಮುಖ್ಯವಾಗಿ 2025 ಮೇ ತಿಂಗಳಲ್ಲಿ ಎಫ್.ಎಫ್.ರೇಶ್ಮಿ ನಿವೃತ್ತಿ, 2025 ನವೆಂಬರ್ ತಿಂಗಳಲ್ಲಿ ಪ್ರಮೋದ್ ಸಾವಂತ್ ಅವರ ನಿವೃತ್ತಿ ಬಳಿಕ ಸೂಕ್ತ ಸಾರಥಿ ಸಿಗದೆ ಕುಂದಗೋಳ ಹಿಂದುಳಿದ ವರ್ಗಗಳ ಇಲಾಖೆ, ಕಲ್ಯಾಣಾಧಿಕಾರಿಗಳ ಹುದ್ದೆ ಅತಂತ್ರವಾಗಿದೆ.

ಇನ್ನೇನು ಜೂನ್ ತಿಂಗಳಲ್ಲಿ ಶಾಲೆ, ಕಾಲೇಜು ಆರಂಭ ಹಾಸ್ಟೇಲ್ ಕಾರ್ಯ ಚಟುವಟಿಕೆ ಪುನರಾರಂಭಕ್ಕೂ ಮುನ್ನ ಕಲ್ಯಾಣಾಧಿಕಾರಿಗಳ ಹುದ್ದೆ ಭರ್ತಿ ಆಗುತ್ತಾ ? ಕಾದು ನೋಡಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/03/2026 08:56 am

Cinque Terre

100.91 K

Cinque Terre

0

ಸಂಬಂಧಿತ ಸುದ್ದಿ