ಹುಬ್ಬಳ್ಳಿ: ಅಯ್ಯೋ ದೇವರೆ ನಮ್ಮ ಹುಬ್ಬಳ್ಳಿಗೆ ಇದೆಂಥಾ ಗತಿ ಬಂತ್ ನೋಡ್ರಿ.... ಯಾವುದರ ಒಂದು ಪ್ರಾಜೆಕ್ಟ್ ಮಾಡಿದ್ರೆ ಏನಾದ್ರೂ ಒಂದು ಎಡವಟ್ಟು ಆಗೆ ಬಿಡ್ತೈತಿ ನೋಡ್ರಿ.... ಕೋಟ್ಯಾಂತರ ರೂ. ರೊಕ್ಕಾ ಹಾಕಿ ಹುಬ್ಬಳ್ಳಿ ಗೋಕುಲ್ ರೋಡ್‌ದಲ್ಲಿ ಕೇಂದ್ರ ಬಸ್ ನಿಲ್ದಾಣ ಮಾಡ್ಯಾರ.... ಆದ್ರ ಒಂದೇ ಒಂದ ಮಳಿಗೆ ಮೇಲ್ಛಾವಣಿ ಕಿತ್ತುಬಿದ್ದ ನೀರ ಸೋರಾಕತೈತಿ ನೋಡ್ರಿ...
ನೋಡ್ರಿ ನೋಡ್ರಿ... ಹೆಂಗ ಆಗೈತಿ ನಮ್ಮ ಪರಿಸ್ಥಿತಿ.. ಯಾಕ ಅಂದ್ರ ಇಲ್ಲಿ ಏನ ಮಾಡಿದ್ರೂ ಹೇಳೋರಿಲ್ಲಾ ಕೇಳೋರಿಲ್ಲ ಅಂತ ಹೆಂಗ್ ಬೇಕಂತ ಏನ ಬೇಕಾದ್ರೂ ಮಾಡಾಕತ್ತಾರ... ಈ ಹೊಸ ಬಸ್ ಸ್ಟ್ಯಾಂಟ್ ಕಟ್ಟಿ ಬಾಳ ತಿಂಗಳ ಆಗಿಲ್ಲಾ.. ಆಗಲೇನ ಒಂದ ಮಳಿಗೆ ಮೇಲ್ಛಾವಣಿ ಕಿತ್ತಬಿದ್ದ ಮಳಿ ನೀರ ಬಿಳ್ಳಾಕತೈತಿ... ಅದೇನ ಬಸ್ ಸ್ಟ್ಯಾಂಡ್ ಕಟ್ಟಿರೀ ಪಾ... NWKRTC ಎಮ್.ಡಿ ಪ್ರಿಯಾಂಗ್ ಮೇಡಂ ಇದರ ಬಗ್ಗೆ ತನಿಖೆ ಮಾಡ್ರಿ.. ಇಂತಾ ಕಳಪೆ ಕಾಮಗಾರಿ ಮಾಡಿದವರ ಮೇಲೆ ಕ್ರಮ ತಗೋರಿ.... ಯಾರದೋ ದುಡ್ಡು ಯಲ್ಲಮ್ಮನ ಜಾತ್ರಿ ಆಗಾಕತೈತಿ ನೋಡ್ರಿ ಹುಬ್ಳಿದಾಗ...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/03/2026 04:35 pm
LOADING...