ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ : ರಾಮೇಶ್ವರ ಜಾತ್ರೆಗೆ ಹರಿದುಬಂದ ಭಕ್ತ ಸಾಗರ !

ಮೂಡಿಗೆರೆ : ತಾಲೂಕಿನ ದೇವವೃಂದದ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಮತ್ತು ರಥೋತ್ಸವವು ಅತ್ಯಂತ ವೈಭವದಿಂದ ನೆರವೇರಿದೆ. ಮಲೆನಾಡು ಭಾಗದಲ್ಲಿ ಹೊಸ ವರ್ಷ ಹಾಗೂ ವಸಂತ ಮಾಸದ ಮೊದಲ ಜಾತ್ರೆ ಎನ್ನುವ ಹೆಗ್ಗಳಿಕೆಗೆ ಈ ಪುರಾತನ ದೇಗುಲ ಪಾತ್ರವಾಗಿದೆ. ಈ ಉತ್ಸವದ ವಿಶೇಷತೆಯೆಂದರೆ, ರಥೋತ್ಸವಕ್ಕೂ ಮೊದಲು ಊರುಬಗೆ, ಕೆಸವೊಳಲು, ಉಗ್ಗೇಹಳ್ಳಿ, ಜಂಬರಡಿ ಗ್ರಾಮಗಳ ಮುಖ್ಯಸ್ಥರನ್ನು ವಾದ್ಯಗೋಷ್ಠಿಯೊಂದಿಗೆ ಗೌರವಪೂರ್ವಕವಾಗಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ದೇವವೃಂದದ ಪ್ರತಿಯೊಂದು ಮನೆಯಲ್ಲೂ ಶಿವರಾತ್ರಿ ಮತ್ತು ಯುಗಾದಿಯನ್ನು ಸುಗ್ಗಿ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯವಿದೆ.

​ದೇವಸ್ಥಾನದ ಸಂಕೀರ್ಣದಲ್ಲಿ ರಾಮೇಶ್ವರ ಸ್ವಾಮಿಯ ಜೊತೆಗೆ ಪಾರ್ವತಿ, ಗಣಪತಿ, ಚನ್ನಕೇಶವ, ಮಲ್ಲಿಕಾರ್ಜುನ ಸೇರಿದಂತೆ ಹಲವು ದೇವತೆಗಳ ಗುಡಿಗಳಿದ್ದು, ನಿತ್ಯ ಪೂಜೆಗಳು ನಡೆಯುತ್ತವೆ. ಹಳೆ ಮೈಸೂರು ಭಾಗದ ಜಿಲ್ಲೆಗಳು ಮಾತ್ರವಲ್ಲದೆ ಕರಾವಳಿಯ ಬೆಳ್ತಂಗಡಿ ಪುತ್ತೂರು ಹಾಗೂ ಕಾಸರಗೋಡು ಭಾಗದ ಅನೇಕ ಕುಟುಂಬಗಳಿಗೆ ರಾಮೇಶ್ವರ ಸ್ವಾಮಿ ಮನೆದೇವರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ರಥೋತ್ಸವಕ್ಕೂ ಮೊದಲೇ ಇಲ್ಲಿಗೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ವಿವಿಧ ಭಾಗದ ದಾನಿಗಳಿಂದ ಮೂರು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆಯನ್ನು ನಡೆಯುತ್ತದೆ.

Edited By : PublicNext Desk
PublicNext

PublicNext

20/03/2026 02:09 pm

Cinque Terre

13 K

Cinque Terre

0

ಸಂಬಂಧಿತ ಸುದ್ದಿ