ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಒಂದೇ ಆಕಾಶದಡಿ ಯುಗಾದಿ - ಈದ್‌ ಹಬ್ಬದ ಸಡಗರ !

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಇಂದು ಧಾರ್ಮಿಕ ಸೌಹಾರ್ದತೆಯ ಸುಂದರ ಸಂಗಮವೊಂದು ಅನಾವರಣಗೊಂಡಿದೆ. ಆಕಾಶದಲ್ಲಿ ಮೂಡಿದ ಚಂದ್ರ ಎರಡು ವಿಭಿನ್ನ ಸಂಸ್ಕೃತಿಗಳ ಸಂಭ್ರಮಕ್ಕೆ ಸಾಕ್ಷಿಯಾದನು. ​ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಜೆ ಚಂದ್ರದರ್ಶನವಾಗುತ್ತಿದ್ದಂತೆ ಮುಸ್ಲಿಂ ಬಾಂಧವರಲ್ಲಿ ಸಡಗರ ಮನೆಮಾಡಿದೆ. ಪವಿತ್ರ ರಂಜಾನ್ ಮಾಸದ ಉಪವಾಸದ ನಂತರ ಇಂದು ಚಂದ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಳೆ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ಮಸೀದಿಗಳಲ್ಲಿ ಪ್ರಾರ್ಥನೆ ಹಾಗೂ ಶುಭಾಶಯಗಳ ವಿನಿಮಯದೊಂದಿಗೆ ಹಬ್ಬದ ಕಳೆ ಕಳೆಗಟ್ಟಿದೆ.

​ಇನ್ನೊಂದೆಡೆ, ಯುಗಾದಿಯ ಸಂಭ್ರಮದಲ್ಲಿರುವ ಹಿಂದೂ ಬಾಂಧವರು ಕೂಡ ಸಂಜೆ ಚಂದ್ರನನ್ನು ಕಂಡು ಭಕ್ತಿಪೂರ್ವಕವಾಗಿ ನಮಿಸಿದರು. ಹೊಸ ವರ್ಷದ ಆಗಮನದ ಸಂಕೇತವಾಗಿ ಬೇವು-ಬೆಲ್ಲ ಸವಿದು, ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡಿದರು. ಒಂದೇ ಆಕಾಶದಲ್ಲಿ ಮೂಡಿದ ಚಂದ್ರನನ್ನು ಕಂಡು ಎರಡು ಸಮುದಾಯಗಳು ತಮ್ಮ ತಮ್ಮ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿರುವುದು ಕಾಫಿನಾಡಿನ ಜನರಲ್ಲಿ ಭಾವೈಕ್ಯತೆಯ ಮೆರುಗನ್ನು ಹೆಚ್ಚಿಸಿದೆ.

Edited By : PublicNext Desk
PublicNext

PublicNext

20/03/2026 07:37 pm

Cinque Terre

9.27 K

Cinque Terre

0

ಸಂಬಂಧಿತ ಸುದ್ದಿ