ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಒಂದೇ ವೇದಿಕೆಯಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು : ಕಾಫಿನಾಡಲ್ಲಿ ಮೊಳಗಿತು ಒಗ್ಗಟ್ಟಿನ ಮಂತ್ರ

ಚಿಕ್ಕಮಗಳೂರು: ಧರ್ಮದ ಗೋಡೆಗಳನ್ನು ಮೀರಿ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಸೌಹಾರ್ದ ಕೂಟವೊಂದು ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯ ಮೊಯುದ್ದಿನ್ ಜುಮಾ ಮಸೀದಿಯ ವತಿಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಬಾಂಧವರೆಲ್ಲರೂ ಒಗ್ಗೂಡಿ ಭಾವೈಕ್ಯತೆಯ ಹೊಸ ಭಾಷ್ಯ ಬರೆದರು. ​ಈ ವಿಶೇಷ ಸೌಹಾರ್ದ ಕೂಟವನ್ನುದ್ದೇಶಿಸಿ ಮಾತನಾಡಿದ ಮಸೀದಿಯ ಧರ್ಮಗುರುಗಳಾದ ಫರೂಕ್ ಸಖಾಫಿ ಪ್ರಸ್ತುತ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ನಾವೆಲ್ಲರೂ ಒಗ್ಗಟ್ಟಿನಿಂದ ಬಾಳುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

ಧರ್ಮ ಯಾವುದಾದರೂ ಮನುಷ್ಯತ್ವವೇ ಶ್ರೇಷ್ಠ ಎಂಬ ಸಂದೇಶ ಸಾರಿದ ಅವರು, ಪರಸ್ಪರ ಗೌರವ ಮತ್ತು ವಿಶ್ವಾಸದ ಮೂಲಕ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು. ಈ ಸಮಾವೇಶವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯದೆ, ವಿವಿಧ ಸಮುದಾಯಗಳ ನಡುವೆ ಪ್ರೀತಿಯ ಸೇತುವೆಯಾಗಿ ಹೊರಹೊಮ್ಮಿತು.

ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಈ ಅಪರೂಪದ ಕ್ಷಣದಲ್ಲಿ ಪಾಲ್ಗೊಂಡು ಸೌಹಾರ್ದತೆಯ ಶಕ್ತಿಯನ್ನು ಜಗತ್ತಿಗೆ ಸಾರುವ ಕೆಲಸ ಮಾಡಿದರು.

Edited By :
PublicNext

PublicNext

20/03/2026 05:03 pm

Cinque Terre

11.94 K

Cinque Terre

0

ಸಂಬಂಧಿತ ಸುದ್ದಿ