ಚಿಕ್ಕಮಗಳೂರು : ರಂಜಾನ್ ಮಾಸದ ಪವಿತ್ರ ಉಪವಾಸ ವ್ರತಾಚರಣೆ ಇಂದಿಗೆ ಕೊನೆಯಾಗಿದ್ದು ನಾಳೆ ಕುತುಬ್ ಎ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ ಹೀಗಾಗಿ ಕಾಫಿನಾಡಿನಲ್ಲಿ ಸಂಭ್ರಮ ಕಳೆಗಟ್ಟಿದ್ದು, ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ, ಐ.ಜಿ. ರಸ್ತೆ ಹಾಗೂ ಮಾರ್ಕೆಟ್ ರಸ್ತೆಗಳಲ್ಲಿ ಹಬ್ಬದ ವ್ಯಾಪಾರ ವಹಿವಾಟು ಭರದಿಂದ ಸಾಗಿದ್ದು, ವ್ಯಾಪಾರಿಗಳಲ್ಲಿ ಸಂತಸ ಮೂಡಿಸಿದೆ. ಅದರಲ್ಲೂ ಸಂಜೆಯ ಇಫ್ತಾರ್ ಪ್ರಾರ್ಥನೆಯ ನಂತರ ಮಾರುಕಟ್ಟೆಯ ಅಂಗಡಿಗಳು ಜನಜಂಗುಳಿಯಿಂದ ಕೂಡಿ ಹಬ್ಬದ ಕಳೆ ಹೆಚ್ಚಿಸಿವೆ.
ಹಬ್ಬದ ನಿಮಿತ್ತ ಬಟ್ಟೆ ಅಂಗಡಿಗಳಲ್ಲಿ ವಿಶೇಷ ವಿನ್ಯಾಸದ ಹಾಗೂ ವಿನೂತನ ಫ್ಯಾಷನ್‌ನ ಉಡುಪುಗಳು ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಹಿಳೆಯರ ಬಟ್ಟೆಗಳು, ವಿವಿಧ ಸೌಂದರ್ಯ ವರ್ಧಕ ಉತ್ಪನ್ನಗಳು, ಚಪ್ಪಲಿಗಳು, ಫ್ಯಾನ್ಸಿ ಆಭರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಮನೆಮಂದಿಗೆಲ್ಲ ಹೊಸ ಬಟ್ಟೆ ಹಾಗೂ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಲು ಸಾರ್ವಜನಿಕರು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಮಕ್ಕಳ ಆಟಿಕೆಗಳು ಮತ್ತು ಬಗೆಬಗೆಯ ಸಿಹಿ ತಿಂಡಿಗಳ ಅಂಗಡಿಗಳೂ ಸಹ ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ವಿಶೇಷವಾಗಿ ಈ ಬಾರಿಯ ಹಬ್ಬವು ಸುಗಂಧ ದ್ರವ್ಯಗಳ ಮಾರಾಟಕ್ಕೆ ಹೊಸ ಚೈತನ್ಯ ನೀಡಿದೆ. ಮಾರುಕಟ್ಟೆಯಲ್ಲಿ ದೇಶ-ವಿದೇಶಗಳ ವಿವಿಧ ಬಗೆಯ ಸುಗಂಧ ದ್ರವ್ಯಗಳು ಲಭ್ಯವಿದ್ದರೂ, 'ಜನ್ನತ್ ಉಲ್ ಫಿರ್ದೋಸ್' ಸುಗಂಧಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.
PublicNext
20/03/2026 08:07 pm
LOADING...