ಶೃಂಗೇರಿ : ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಅಧೀನದಲ್ಲಿರುವ 'ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲಾ' ವತಿಯಿಂದ 10 ರಿಂದ 15 ವರ್ಷದೊಳಗಿನ ಉಪನೀತ ಬ್ರಾಹ್ಮಣ ವಟುಗಳಿಗಾಗಿ 15 ದಿನಗಳ ವಿಶೇಷ 'ಸಂಸ್ಕಾರ' ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು 2026ರ ಏಪ್ರಿಲ್ 30 ರಿಂದ ಮೇ 14 ರವರೆಗೆ ಶೃಂಗೇರಿಯಲ್ಲಿ ನಡೆಯಲಿದ್ದು, ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ವಸತಿಯುತವಾಗಿರುವ ಈ ಶಿಬಿರದಲ್ಲಿ ಮಕ್ಕಳಿಗೆ ಋಗ್ವೇದ, ಯಜುರ್ವೇದದ ಸಂಧ್ಯಾವಂದನೆ, ಗಣಪತಿ ಸೂಕ್ತ, ಅಥರ್ವಶೀರ್ಷ ಹಾಗೂ ವಿವಿಧ ಸ್ತೋತ್ರಗಳನ್ನು ಉಚ್ಚಾರಣೆ ಸಹಿತ ಬೋಧಿಸಲಾಗುತ್ತದೆ. ಶಿಬಿರಾರ್ಥಿಗಳಿಗೆ ಪ್ರತಿದಿನ ಯೋಗಾಭ್ಯಾಸ, ಸದಾಚಾರ ಮತ್ತು ನೈತಿಕ ಶಿಕ್ಷಣದ ಮೌಲ್ಯಗಳನ್ನು ಧಾರೆ ಎರೆಯುವುದರ ಜೊತೆಗೆ ಜಗದ್ಗುರುಗಳ ಅನುಗ್ರಹ ಭಾಷಣಗಳ ಪ್ರದರ್ಶನವೂ ಇರಲಿದೆ. ಇದರೊಂದಿಗೆ ಸ್ಥಳೀಯ ದೇವಾಲಯಗಳ ದರ್ಶನ ಹಾಗೂ ವಿದ್ವಾಂಸರೊಂದಿಗೆ ಧರ್ಮಕ್ಕೆ ಸಂಬಂಧಿಸಿದ ಜಿಜ್ಞಾಸೆಗಳನ್ನು ಪರಿಹರಿಸಿಕೊಳ್ಳುವ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಸತಿ, ಭೋಜನ ಹಾಗೂ ಉಪಾಹಾರದ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳು ತಮ್ಮ ದೈನಂದಿನ ಪೂಜಾ ಸಾಮಗ್ರಿಗಳನ್ನು ಮಾತ್ರ ತರಬೇಕಾಗುತ್ತದೆ. ಈ ಶಿಬಿರದಲ್ಲಿ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ಮೊದಲ ಆದ್ಯತೆಯ ಮೇರೆಗೆ ಪ್ರವೇಶ ನೀಡಲಾಗುತ್ತಿದ್ದು,
ಆಸಕ್ತ ಪೋಷಕರು. ಏಪ್ರಿಲ್ 20, 2026 ರ ಒಳಗಾಗಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪಾಠಶಾಲೆಯ ಅಧ್ಯಕ್ಷರನ್ನು 8762594805 ಅಥವಾ 8217251670 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ. ಏಪ್ರಿಲ್ 29 ರ ಸಂಜೆ ಮಕ್ಕಳನ್ನು ಪಾಠಶಾಲೆಗೆ ಕರೆತರಬೇಕು ಮತ್ತು ಮೇ 14 ರ ಮಧ್ಯಾಹ್ನದ ನಂತರ ಮನೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿಕೊಳ್ಳಬೇಕು.
PublicNext
20/03/2026 07:04 pm
LOADING...