ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆ ಇಲ್ಲ, ಒಳ ಚರಂಡಿ ವ್ಯವಸ್ಥೆಯೂ ಇಲ್ಲ! - ಮೂಲ ಸೌಕರ್ಯಕ್ಕಾಗಿ ವಾರ್ಡ್ 49ರ ಹನಮಂತ ನಗರದ ನಿವಾಸಿಗಳ ಗೋಳಾಟ

ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯಾವಾಗ ಆಗುತ್ತೊ ಗೊತ್ತಿಲ್ಲ. ಆದ್ರೆ ಇನ್ನೂವರೆಗೂ ಕೂಡ ಕೆಲವೊಂದಿಷ್ಟು ಏರಿಯಾಗಳಲ್ಲಿ ರಸ್ತೆ ಇಲ್ಲದೆ, ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಗೋಳಾಡುತ್ತಿದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಅಂದ್ರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 49ರಲ್ಲಿನ ಲಿಂಗರಾಜ ನಗರ, ಹನಮಂತ ನಗರ. ಇಲ್ಲಿ ಸರಿಯಾದ ರಸ್ತೆ ಇಲ್ಲ, ಒಳ ಚರಂಡಿ ವ್ಯವಸ್ಥೆಯೂ ಇಲ್ಲದೇ ನಿವಾಸಿಗಳು ರೋಸಿ ಹೋಗಿದ್ದಾರೆ. ಬನ್ನಿ ಈ ಸ್ಟೋರಿ ನೊಡ್ಕೊಂಡ ಬರೋಣ..

ಹೌದು, ಹೀಗೆ ಕೆಸರಿನಲ್ಲಿ ಹರಸಾಹಸ ಪಡುತ್ತಾ ಓಡಾಡ್ತಿರೋ ವಯಸ್ಕರು, ಮಕ್ಕಳನ್ನು ನೋಡ್ತಾ ಇದ್ರೆ ಅಯ್ಯೋ ಪಾಪ ಎನಿಸುತ್ತೆ. ದಿನಿನಿತ್ಯ ಕಿರಿಕಿರಿ ಅನುಭವಿಸುತ್ತಿರೋ ಲಿಂಗರಾಜ ನಗರದ ಹನಮಂತ ನಗರದ ನಿವಾಸಿಗಳು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

ಹದಗೆಟ್ಟ ರಸ್ತೆಯಲ್ಲಿ ಜನ ಎದ್ದುಬಿದ್ದು ದಿನ ಕಳಿಯುತ್ತಾ, ರೋಸಿ ಹೋಗಿ ಕಾರ್ಪೊರೇಟರ್ ವೀಣಾ ಭಾರದ್ವಾಡ ಹಾಗೂ ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಒಂದು ಚಿಕ್ಕ ಮಳೆ ಬಂದ್ರೆ ಸಾಕು ರಸ್ತೆಯೆಲ್ಲಾ ಕೆಸರುಮಯ.. ಇಂತಹ ರಸ್ತೆಯಲ್ಲೇ ಇಲ್ಲಿನ ನಿವಾಸಿಗಳು ದಿನಂಪ್ರತಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಏನೆಲ್ಲಾ ಸಮಸ್ಯೆಗಳು ಇವೆ ಎಂಬುದನ್ನು ಅಲ್ಲಿ ನಿವಾಸಿಗಳೇ ಹೇಳ್ತಾರೆ ಕೇಳಿ.

ಈ ಹನಮಂತ ನಗರದಲ್ಲಿ ಇಷ್ಟೊಂದು ಸಮಸ್ಯೆಗಳು ಇದ್ರೂ ಕೂಡ, ಈ ಭಾಗದ ಕಾರ್ಪೊರೇಟರ್ ವೀಣಾ ಭಾರದ್ವಾಡ ಏನು ಮಾಡುತ್ತಿದ್ದೀರಾ..? ಕೂಡಲೇ ಇಲ್ಲಿ ರಸ್ತೆ, ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಲ್ಲಿನ ನಿವಾಸಿಗಳ ಬದುಕಿಗೆ ನೆಮ್ಮದಿ ನೀಡಬೇಕಿದೆ.

ಕ್ಯಾಮರಾ ಪರ್ಸನ್ ಗಜಾನನ ಜೊತೆ ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/03/2026 02:46 pm

Cinque Terre

118.58 K

Cinque Terre

2

ಸಂಬಂಧಿತ ಸುದ್ದಿ