ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊನೆಗೂ ಅರೆಸ್ಟ್ ಆದ ಜಿಮ್ ಟ್ರೇನರ್ ಸಾಬೀರ್

ಧಾರವಾಡ: ಧಾರವಾಡದ ಮರಾಠಾ ಕಾಲೊನಿಯಲ್ಲಿರುವ ಫಿಟ್ನೆಸ್ ಫಸ್ಟ್ ಎಂಬ ಜಿಮ್‌ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ ಸಾಬೀರ್ ಕೊನೆಗೂ ಅರೆಸ್ಟ್ ಆಗಿದ್ದಾನೆ.

ಸಾಬೀರ್, ಜಿಮ್‌ಗೆ ಬರುವ ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಿದ್ದು, ಮಹಿಳೆಯರ ಅಂಗಾಂಗದ ಚಿತ್ರ ಬಿಡಿಸಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾನೆ ಎಂದು ಆರೋಪಿಸಿ ಜಿಮ್‌ಗೆ ಬೀಗ ಹಾಕಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕೆಲ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ವಿಜಯಲಕ್ಷ್ಮೀ ಎಂಬ ಸಂತ್ರಸ್ತ ಮಹಿಳೆ ಕೂಡ ಸಾಬೀರ್ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಇದೀಗ ಸಾಬೀರ್‌ನನ್ನು ಬಂಧಿಸಿದ್ದಾರೆ.

ಜಿಮ್‌ನಲ್ಲಿ ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಾನೆ ಎಂಬ ಆರೋಪದ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಾಬೀರ್‌ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದೀಗ ಸಾಬೀರ್‌ನನ್ನು ಬಂಧಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 05:48 pm

Cinque Terre

18.39 K

Cinque Terre

2

ಸಂಬಂಧಿತ ಸುದ್ದಿ