ಗುಂಡ್ಲುಪೇಟೆ : ಇದೆ ತಿಂಗಳು 21 ಕ್ಕೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಕಪ್ಪು ಭಾವುಟ ಪ್ರದರ್ಶನ ಮಾಡುತ್ತೇವೆ ಎಂದು ರೈತ ಮುಖಂಡ ಡಾ.ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಸಂಘ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರ ರೈತ ವಿರೋಧಿ ನಡೆಯನ್ನ ಖಂಡಿಸಿ ಆಕ್ರೋಶ ಹೊರಹಾಕಿದರು. ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದ ರೈತ ಸಂಘ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಕಳೆದ ಬಾರಿ ಚಾಮರಾಜನಗರಕ್ಕೆ ಆಗಮಿಸಿದ್ದ ವೇಳೆ ರೈತರು ಕೊಟ್ಟ ಮನವಿ ಪತ್ರವನ್ನ ಕಸದ ಬುಟ್ಟಿಗೆ ಎಸೆದು ದುರಹಂಕಾರದ ಪರಮಾವಧಿತನ ತೋರಿದ್ದರು, ರೈತರು ಸಮಸ್ಯೆ ಹೇಳಲು ಹೋದರೆ ಸಿಡಿಮಿಡಿಗೊಳ್ಳುವ ಸಿದ್ದರಾಮಯ್ಯ ವಯನಾಡು ಸಂಸದೆ ಪ್ರಿಯಾಂಕ ವಾದ್ರಾಗೆ ಗುಲಾಮಗಿರಿ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ರೈತಪರ ಕೆಲಸ ಮಾಡಲಾಗದ ಸಿದ್ದರಾಮಯ್ಯ ಆಗಮನಕ್ಕೆ ನಮ್ಮ ವಿರೋಧವಿದೆ ಹಾಗಾಗಿ ಮನವಿ ಕೊಡುವ ಪ್ರಮೇಯವೇ ಇಲ್ಲ ಕಪ್ಪುಭಾವುಟ ಪ್ರದರ್ಶನ ಮಾಡಲಾಗುವುದು ಎಂದರು.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
15/04/2026 01:36 pm
LOADING...