ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಲವು ವರ್ಷಗಳಿಂದ ಕತ್ತಲು ಕವಿದಿದ್ದ ಮೆದಗನಾಣೆಯಲ್ಲಿ ಈಗ ಬೆಳಕು

ಚಾಮರಾಜನಗರ : ಹಲವು ವರ್ಷಗಳಿಂದ ಕತ್ತಲು ಕವಿದಿದ್ದ ಮೆದಗನಾಣೆ ಗ್ರಾಮದಲ್ಲಿ ವಿದ್ಯುತ್ ದೀಪದ ಬೆಳಕು ಕಂಗೊಳಿಸಿ ಕತ್ತಲು ದೂರಾದ ಪರಿಣಾಮ ಗ್ರಾಮದ ಆದಿವಾಸಿ ಜನರು ಸಂಭ್ರಮಿಸಿದ್ದಾರೆ.

ಮಲೆ ಮಹದೇಶ್ವರಬೆಟ್ಟದ ಆದಿವಾಸಿಗಳು ವಾಸಿಸುವ ಮೆದಗನಾಣೆ ಗ್ರಾಮದಲ್ಲಿ ವಿದ್ಯುತ್ ಸೌಲಭ್ಯಕ್ಕಾಗಿ ಕಳೆದ ಒಂದು ವಾರದಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಪ್ರಸಾರಗೊಂಡು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ಚೆಸ್ಕಾಂ ಸಿಬ್ಬಂದಿಯನ್ನು ಮೆದಗನಾಣೆಗೆ ಕಳುಹಿಸಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಕೊಡಿಸುವ ಕೆಲಸಕ್ಕೆ ಮುಂದಾಯಿತು. ಹಲವು ವರ್ಷಗಳ ನಂತರ ಗ್ರಾಮದ ರಸ್ತೆಗಳು, ಮನೆ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಿದ ಪರಿಣಾಮ ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಆದಿವಾಸಿ ಸಮುದಾಯ ಬೆಳಕು ನೋಡುವಂತಾಯಿತು.

ಇದರಿಂದ  ಮೊದಲ ಬಾರಿಗೆ ವಿದ್ಯುತ್ ಕಂಡ  ಆದಿವಾಸಿಗಳು ಸಂಭ್ರಮಿಸಿದರು. ಅಲ್ಲದೆ ಮನೆ ಮುಂದಿನ ವಿದ್ಯುತ್ ಸಂಪರ್ಕ ಡಬ್ಬಿಗೆ ಸಂತಸದಿಂದ ಪೂಜೆ ಸಲ್ಲಿಸಿದರು.

 

Edited By : PublicNext Desk
Kshetra Samachara

Kshetra Samachara

18/04/2026 09:20 am

Cinque Terre

760

Cinque Terre

0

ಸಂಬಂಧಿತ ಸುದ್ದಿ