ಗುಂಡ್ಲುಪೇಟೆ : ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದ ಗುಂಡ್ಲುಪೇಟೆ ಶಿವಪುರ ಮಾರ್ಗದ ಬಸ್ಸಿನಲ್ಲಿ ಸಿಕ್ಕ ಒಂದು ಜೊತೆ ಬಂಗಾರದ ಕಿವಿಯೋಲೆ ಹಾಗೂ ಆರು ಸಾವಿರ ರೂ. ಹಣವಿದ್ದ ಪರ್ಸನ್ನ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ಪೆಕ್ಟರ್ ಸ್ವಾಮಿ ಅವರು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳವಾರ ಸಂಜೆ ಎಂದಿನಂತೆ ಕರ್ತವ್ಯದಲ್ಲಿದ್ದ ವೇಳೆ ಪ್ರಯಾಣಿಕರು ಇಳಿದ ಬಳಿಕ ಬಸ್ ಸೀಟಿನಡಿ ಪರ್ಸ್ ಬಿದ್ದಿರುವುದನ್ನ ಮನಗಂಡ ಎಟಿಐ ಸ್ವಾಮಿ ಪರಿಶೀಲಿಸಿದ ವೇಳೆ ಅದರಲ್ಲಿ ಆರು ಸಾವಿರ ರೂ ಹಣ ಹಾಗೂ ಒಂದು ಜೊತೆ ಕಿವಿಯೋಲೆ ಇದ್ದದ್ದು ಖಾತ್ರಿಯಾಗಿದೆ ಬಳಿಕ ಗುಂಡ್ಲುಪೇಟೆ ಡಿಪೋಗೆ ಆಗಮಿಸಿದ ಸ್ವಾಮಿಯವರು ಆಧಾರ್ ಕಾರ್ಡ್ ವಿಳಾಸ ನೋಡಿ ಶಿವಪುರ ಗ್ರಾಮದ ಸೌಮ್ಯ ಎಂಬವರಿಗೆ ಸೇರಿದ್ದು, ಎಂದು ಗೊತ್ತಾದ ಕೂಡಲೇ ಮಾಲೀಕರನ್ನ ಡಿಪೋಗೆ ಬರಮಾಡಿ ಹಣ ಹಾಗೂ ಚಿನ್ನದ ಕಿವಿಯೋಲೆಯನ್ನ ಹಸ್ತಾಂತರಿಸಿದರು. ಸ್ವಾಮಿಯವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
16/04/2026 11:02 am
LOADING...