ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ರೈಲು ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ

ಮಂಗಳೂರು : ಮುಂಬಯಿಯ ಸಿಎಸ್‌ಎಂಟಿ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್ 16 ಮತ್ತು 17ರ ವಿಸ್ತರಣೆ ಕಾಮಗಾರಿ ಹಿನ್ನೆಲೆ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಈಗಾಗಲೇ ಜಾರಿಯಲ್ಲಿರುವ ಶಾರ್ಟ್ ಟರ್ಮಿನೇಶನ್ ಕ್ರಮವನ್ನು ಮೇ 19ರ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಹೀಗಾಗಿ ರೈಲು ಸಂಖ್ಯೆ 12134 ಮಂಗಳೂರು ಜಂಕ್ಷನ್ - ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಮೇ 18ರ ವರೆಗೆ ಸಿಎಸ್‌ಎಂಟಿ ನಿಲ್ದಾಣಕ್ಕೆ ಹೋಗದೆ, ಥಾಣೆ ನಿಲ್ದಾಣಕ್ಕೆ ಪ್ರಯಾಣ ಅಂತ್ಯಗೊಳಿಸಲಿದೆ. ಅಲ್ಲಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮೂಲಕ ಹೋಗಬೇಕಾಗಿದೆ.

ಕೊಯಮತ್ತೂರು ರೈಲುಗಳು ಮೆಟ್ಟುಪಾಲಯಂಗೆ ವಿಸ್ತರಣೆಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್‌ಪ್ರೆಸ್ (16323/24) ಮತ್ತು ಮಂಗಳೂರು ಕೊಯಮತ್ತೂರು ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22609/10) ರೈಲುಗಳನ್ನು ತಮಿಳುನಾಡಿನ ಮೆಟ್ಟುಪಾಲಯಂ ವರೆಗೆ ವಿಸ್ತರಿಸಲಾಗುವುದು. ಇದು ಆಗಸ್ಟ್‌ನಿಂದ ಅನ್ವಯವಾಗಲಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

28/04/2026 12:45 pm

Cinque Terre

492

Cinque Terre

0

ಸಂಬಂಧಿತ ಸುದ್ದಿ